ಸಮಾಜದಲ್ಲಿ ಸಕಾರಾತ್ಮಕತೆ ಮೂಡಿಸುವ ಕೆಲವೊಂದು ನಡವಳಿಕೆಗಳು ಭಾರೀ ಇಷ್ಟವಾಗಿಬಿಡುತ್ತವೆ, ಅಂಥ ವ್ಯಕ್ತಿಗಳು ಅಪರಿಚಿತರೇ ಆದರೂ ಮನಗೆಲ್ಲುತ್ತಾರೆ.
ಇಂಥದ್ದೇ ಘಟನೆಯೊಂದರಲ್ಲಿ; ರೆಸ್ಟೋರೆಂಟ್ನ ವೇಟರ್ ಒಬ್ಬರು ಅನ್ಯಲಿಂಗಿ ಎಂಬ ಕಾರಣಕ್ಕೆ ಅವರಿಗೆ ಟಿಪ್ ನೀಡಲು ಗ್ರಾಹಕರಿಬ್ಬರು ನಿರಾಕರಿಸಿದ ಮೇಲೆ ಅವರ ನೆರವಿಗೆ ಬಂದ ನೆಟ್ಟಿಗರು ಆತನಿಗೆ ಒಟ್ಟಾರೆ $4500 (3.34 ಲಕ್ಷ ರೂಪಾಯಿ) ಟಿಪ್ ಸಂಗ್ರಹಿಸಿದ್ದಾರೆ.
ಒಟ್ಟಾರೆ $142 ಬಿಲ್ ಪಾವತಿ ಮಾಡಿದ ಗ್ರಾಹಕರು ವೇಟರ್ಗೆ ಸ್ವಲ್ಪವೂ ಟಿಪ್ ಕೊಡದೇ ಇದ್ದಿದ್ದಲ್ಲದೇ, ಬಿಲ್ ಮೇಲೆ ಆತನಿಗೆ ಅವಹೇಳನಕಾರಿಯಾಗಿ ನೋಟ್ ಬರೆದಿಟ್ಟು ಹೋಗಿದ್ದರು. “ಸರ್ವೀಸ್ ಚೆನ್ನಾಗಿತ್ತು. ಆದರೆ ನಾವು ಪಾಪಿ ಸಲಿಂಗಿಗಳಿಗೆ ಟಿಪ್ ಕೊಡೋದಿಲ್ಲ” ಎಂದು ರಸೀದಿ ಮೇಲೆ ನೋಟ್ ಬರೆಯಲಾಗಿತ್ತು.
ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಬದರೀನಾಥ
ಈ ರಸೀದಿಯ ಚಿತ್ರವನ್ನು ಸಹೃದಯಿಗಳ ಗುಂಪೊಂದು ಆನ್ಲೈನ್ನಲ್ಲಿ ಶೇರ್ ಮಾಡಿದೆ. ಈ ಪೋಸ್ಟ್ ಅನ್ನು ಡು ಗುಡ್ ವಿಸ್ಕಾನ್ಸಿನ್ ಎಂಬ ಸಂಘಟನೆಯ ಸಹ-ಸ್ಥಾಪಕ ಎರಿಕ್ ಸಾಲ್ಜ್ವೆಡೆಲ್ ನೋಡಿದ್ದಾರೆ. ರಸೀದಿಯ ಸ್ಕ್ರೀನ್ಶಾಟ್ ಅನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ ಎರಿಕ್ಗೆ ನೆಟ್ಟಿಗರಿಂದ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ 250ರಷ್ಟು ವೈಯಕ್ತಿಕ ದೇಣಿಗೆಗಳ ಮುಖಾಂತರ $4500ಗಳನ್ನು ವೇಟರ್ಗಾಗಿ ಸಂಗ್ರಹಿಸಿದ್ದಾರೆ ಎರಿಕ್.
https://www.facebook.com/esalzwedel/posts/10103699161079053