alex Certify ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದ ವಿತ್ತ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದ ವಿತ್ತ ಸಚಿವಾಲಯ

IT Portal Glitches: Government Summons Infosys CEO To Explain Tax Site Glitches

ಜೂನ್‌ನಿಂದ ಹೊಸದಾಗಿ ಲಾಂಚ್ ಆದ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪದೇ ಪದೇ ಕಂಡುಬರುತ್ತಿರುವ ತಾಂತ್ರಿಕ ದೋಷಗಳ ಬಗ್ಗೆ ವಿವರಿಸಲು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್‌ಗೆ ವಿತ್ತ ಸಚಿವಾಲಯ ಸಮನ್ಸ್ ಕೊಟ್ಟಿದೆ.

ಈ ಬಗ್ಗೆ ಹಿಂದೆಯೂ ಸಹ ಕಳಕಳಿ ವ್ಯಕ್ತಪಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೋರ್ಟಲ್‌ ಅನ್ನು ಇನ್ನಷ್ಟು ಬಳಕೆದಾರ ಸ್ನೇಹಿಯಾಗಿ ಮಾಡಲು ಕೋರಿದ್ದರು.

“ಲಾಂಚ್ ಆಗಿ 2.5 ತಿಂಗಳು ಕಳೆದರೂ ಇನ್ನೂ ಸಹ ಇ-ಫೈಲಿಂಗ್‌ನ ಹೊಸ ಪೋರ್ಟಲ್‌ನಲ್ಲಿ ಏಕಿಷ್ಟು ತಾಂತ್ರಿಕ ದೋಷಗಳಿವೆ ಎಂದು ತಿಳಿಸಲು ಶ್ರೀ ಸಲೀಲ್ ಪರೇಖ್‌ರನ್ನು ವಿತ್ತ ಸಚಿವಾಲಯ ಸಮನ್ಸ್‌ ಕೊಟ್ಟು ಕರೆದಿದೆ. 21/08/2021ರ ಬಳಿಕ ಪೋರ್ಟಲ್‌ ಲಭ್ಯವೇ ಇಲ್ಲದಂತಾಗಿದೆ” ಎಂದು ಆದಾಯ ತೆರಿಗೆ ಇಲಾಖೆ ತನ್ನ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ.

BIG NEWS: 1 ರಿಂದ 8 ನೇ ತರಗತಿ ಆರಂಭಕ್ಕೆ ಚಿಂತನೆ, ಇನ್ನೊಂದು ವಾರದಲ್ಲಿ ಕ್ಲಾಸ್ ಶುರು ಸಾಧ್ಯತೆ

“ಸಮಯ ವ್ಯರ್ಥ ಮಾಡದೇ ಪೋರ್ಟಲ್‌ನ ಸೇವೆಗಳನ್ನು ಸುಧಾರಿಸಿ, ತೆರಿಗೆ ಪಾವತಿದಾರರಿಗೆ ಬಹಳ ಅನಾನುಕೂಲವಾಗುತ್ತಿರುವ ಕಾರಣ ದೋಷಗಳನ್ನು ಆದ್ಯತೆ ಮೇಲೆ ಸರಿಪಡಿಸಿ” ಎಂದು ಐ-ಟಿ ದಿಗ್ಗಜನಿಗೆ ತಿಳಿಸಿದ್ದಾಗಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪೋರ್ಟಲ್ ಅಭಿವೃದ್ಧಿಪಡಿಸಲು ಜನವರಿ 2019ರಿಂದ ಜೂನ್ 2021ರ ನಡುವೆ ಇನ್ಫೋಸಿಸ್‌ಗೆ ಕೇಂದ್ರ ಸರ್ಕಾರ 164.5 ಕೋಟಿ ರೂಪಾಯಿಗಳನ್ನು ಕೊಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...