ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಹಾರ, ಹೂಗುಚ್ಚ, ಶಾಲು ನೀಡುವ ಬದಲು ಪುಸ್ತಕಗಳನ್ನು ನೀಡಬೇಕೆಂದು ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶಕ್ಕೆ ಶಾಸಕ ಹರತಾಳು ಹಾಲಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಗರದಲ್ಲಿ ಈ ಕುರಿತು ಮಾತನಾಡಿರುವ ಅವರು, ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದರಿಂದ ಹೂ ಬೆಳೆಯುವ ರೈತರು, ಮಾರಾಟ ಮಾಡುವವರು ಏನು ಮಾಡಬೇಕು ಎಂದು ಹರತಾಳು ಹಾಲಪ್ಪ ಪ್ರಶ್ನಿಸಿದ್ದಾರೆ.
ಬಿಜೆಪಿ ಗೆಲುವಿಗೆ ಶ್ರಮಿಸಿದ್ದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ‘ಬಂಪರ್’ ಗಿಫ್ಟ್
ಸರ್ಕಾರದ ಈ ಆದೇಶದಿಂದಾಗಿ ಹೂವು ಬೆಳೆಯುವ ರೈತರು, ಸ್ಮರಣಿಕೆಗಳನ್ನು ತಯಾರಿಸುವವರು ಸೇರಿದಂತೆ ಹಲವರ ಬದುಕು ಕಷ್ಟಕರವಾಗುತ್ತದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹರತಾಳು ಹಾಲಪ್ಪ ತಿಳಿಸಿದ್ದಾರೆ.