ಈಗಂತೂ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ರೀತಿಯ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಅಂತಹ ಒಂದು ವಿಡಿಯೋ ನಿಮ್ಮನ್ನು ಸಿಟ್ಟಿಗೇಳುವಂತೆ ಮಾಡುತ್ತದೆ. ಮತ್ತು ಆಲಸ್ಯ ತರಿಸುತ್ತದೆ.
ಗೋಲ್ ಗಪ್ಪ ಮಾರಾಟಗಾರನೊಬ್ಬ ಮೂತ್ರ ವಿಸರ್ಜಿಸಿ ಅದೇ ನೀರನ್ನು ತಿನಿಸು ತಯಾರಿಸಲು ಬಳಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಗೋಲ್ ಗಪ್ಪ ಮಾರಾಟಗಾರನ ಬಣ್ಣ ಬಯಲಾಗಿದೆ.
ಅಸ್ಸಾಂನ ಗೌಹಾಟಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಗೋಲ್ ಗಪ್ಪ ವ್ಯಾಪಾರಿ ಮಗ್ ನಲ್ಲಿ ಮೂತ್ರ ವಿಸರ್ಜಿಸಿ ಅದನ್ನು ಪಕ್ಕದಲ್ಲೇ ಚೆಲ್ಲಿದ್ದಾನೆ. ಅದೇ ಮಗ್ ಬಳಸಿಕೊಂಡು ಅಡುಗೆಗೆ ನೀರು ತೆಗೆದುಕೊಂಡಿದ್ದಾನೆ. ಮಗ್ ನಲ್ಲಿ ಮೂತ್ರ ಮಾಡಿ ಚೆಲ್ಲುವ ಮತ್ತು ಮಗ್ ಬಳಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವರದಿಗಳ ಪ್ರಕಾರ, ಗೌಹಾಟಿಯ ಆಫ್ ಏಯ್ಟ್ ಗಾನ್ ಪ್ರದೇಶದಲ್ಲಿ ಘಟನೆ ನಡೆದಿದೆ. ವಿಡಿಯೋ ಪೊಲೀಸರ ಗಮನಕ್ಕೆ ಬಂದ ನಂತರ ಗೋಲ್ ಗಪ್ಪ ಮಾರಾಟಗಾರನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ವೈರಲ್ ಆಗಿದೆ. ಬಳಕೆದಾರರು ಈ ವಿಡಿಯೊ ಕ್ಲಿಪ್ ಹಂಚಿಕೊಂಡಿದ್ದಾರೆ. ಈ ರೀತಿ ದುರ್ವತನೆ ತೋರಿದ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.