ಘಾಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್ ನ ಖೊಡಾ ಪ್ರದೇಶದಲ್ಲಿ 38 ವರ್ಷದ ತಂದೆಯು ತನ್ನ 16 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ.
ತಂದೆಯೇ ನಾಲ್ಕು ತಿಂಗಳ ಕಾಲ ಮಗಳೆ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿಯ ತಾಯಿ ದೂರು ನೀಡಿದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
10 ನೇ ತರಗತಿ ಓದುತ್ತಿರುವ ಬಾಲಕಿ ಹೊಟ್ಟೆ ನೋವಿನ ಕಾರಣ ಹಿರಿಯ ಸಹೋದರಿ ಮತ್ತು ತಾಯಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದಾಳೆ. ಅಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ತರುವಾಯ ಬಾಲಕಿ ತನ್ನ ಸಹೋದರಿ ಮತ್ತು ತಾಯಿಯ ಮುಂದೆ ತಂದೆಯಿಂದ ನಡೆದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ.
ಇತರ ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದಿದ್ದಾಗ ಚಿಕ್ಕ ಹುಡುಗಿ ತನ್ನ ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆ. ಈ ವರ್ಷ ಏಪ್ರಿಲ್ ನಲ್ಲಿ ಮಗಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಬೆದರಿಸಿ ನಾಲ್ಕು ತಿಂಗಳ ಕಾಲ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ ಯಾರಿಗಾದರೂ ಹೇಳಿದರೆ ತಾಯಿ ಮತ್ತು ಸಹೋದರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಹುಡುಗಿಯ ತಾಯಿ, ಅಪರಾಧದ ಬಗ್ಗೆ ತಿಳಿದ ನಂತರ, ಆರೋಪಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ್ದಾರೆ.