ಏರ್ಪೋರ್ಟ್ ಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಳ್ಳುವ ಥರಾವರಿ ಅವತಾರಕ್ಕೆ ನೆಟ್ಟಿಗರು ಫಿದಾ ಆಗುತ್ತಾರೆ. ಅದರಲ್ಲೂ ನಟಿಯರ ಕ್ಯಾಶುಯೆಲ್, ಟೈಟ್ ಡ್ರೆಸ್, ಸ್ಲೀವ್ಲೆಸ್ ಅವತಾರಗಳಿಗೆ ಪಡ್ಡೆಹೈಕಳು ಹುಚ್ಚೆದ್ದು ಹೋಗುತ್ತಾರೆ.
ಇತ್ತೀಚೆಗೆ ಮುಂಬಯಿ ಏರ್ಪೋರ್ಟ್ನಲ್ಲಿಬಹುಭಾಷಾ ನಟಿ, ಮಿಲ್ಕಿ ಬ್ಯೂಟಿಯಾದ ತಮನ್ನಾ ಭಾಟಿಯಾ ಅವರು ಸ್ಕಿನ್ಟೈಟ್ ಬ್ಲ್ಯಾಕ್ ರಾಕಿಸ್ಟಾರ್ ಡ್ರೆಸ್ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಅವರು ಧರಿಸಿದ್ದ 1.3 ಲಕ್ಷ ರೂ. ಮೌಲ್ಯದ ಹೀಲ್ಸ್ ಇನ್ನೂ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇದು ಕ್ರಿಶ್ಚಿಯನ್ ಲೌಬೌಟಿನ್ ಎಂಬ ಪ್ರತಿಷ್ಠಿತ ಕಂಪನಿಯ ಉತ್ಪನ್ನವಾಗಿದೆ ಎಂದು ನೆಟ್ಟಿಗರು ಚರ್ಚೆ ನಡೆಸಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಯಾಗಿ ಅವರು ಡ್ರೆಸ್ ಬಣ್ಣಕ್ಕೆ ಸರಿಹೊಂದುವ ಮಾಸ್ಕ್ ಕೂಡ ಧರಿಸಿದ್ದರು.