ಮೆಲ್ಬೋರ್ನ್: ಸುದ್ದಿ ಚಾನೆಲ್ ನಲ್ಲಿ ಗಂಭೀರ ವಿಷಯದ ಬಗೆಗಿನ ಸುದ್ದಿ ಬಿತ್ತರಿಸುವಾಗ ಆಕಸ್ಮಿಕವಾಗಿ ಬೇರೆ ಏನಾದರೂ ವಿಡಿಯೋ ಕ್ಲಿಪ್ ಪ್ರಸಾರ ಆದರೆ ಏನಾಗಬಹುದು ಹೇಳಿ..? ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಯೊಂದು ತಪ್ಪಾಗಿ ವಿಡಿಯೋ ಪ್ರಸಾರ ಮಾಡುವ ಮುಖಾಂತರ ನಗೆಪಾಟಲಿಗೀಡಾಗಿದೆ.
ಹೌದು, ಆಸ್ಟ್ರೇಲಿಯಾದ ಎಬಿಸಿ ಟಿವಿ ಸುದ್ದಿಸಂಸ್ಥೆಯ ನೇರಪ್ರಸಾರದಲ್ಲಿ ಪೊಲೀಸ್ ಶ್ವಾನ ಕಲ್ಯಾಣದ ಬಗ್ಗೆ ಸುದ್ದಿ ಬಿತ್ತರಿಸುತ್ತಿತ್ತು. ಕಟ್ಟಡದ ಹೊರಗೆ ಮುಖಕ್ಕೆ ಮಾಸ್ಕ್ ಧರಿಸಿದ ಸೂಟ್-ಬೂಟ್ ಧರಿಸಿರುವ ಪುರುಷರು ಮಾತನಾಡುತ್ತಿರುವ ವಿಡಿಯೋ ಬಿತ್ತರವಾಗುತ್ತಿತ್ತು. ಈ ವೇಳೆ ಹಠಾತ್ತನೇ ಕಪ್ಪು ಬಟ್ಟೆ ಧರಿಸಿರುವ, ನೋಡಿದ ತಕ್ಷಣ ದೆವ್ವದಂತೆ ಕಾಣುವ ವ್ಯಕ್ತಿಗಳು ಇರುವ ವಿಡಿಯೋ ಬಿತ್ತರವಾಗಿದೆ. ಪಕ್ಕದಲ್ಲೇ ತಲೆಕೆಳಗಾದ ಶಿಲುಬೆ ಇರುವುದು ಕೂಡ ವಿಡಿಯೋದಲ್ಲಿ ಕಂಡುಬರುತ್ತದೆ.
BREAKING NEWS: ರಾಜ್ಯದಲ್ಲಿಂದು 1350 ಜನರಿಗೆ ಸೋಂಕು, 18 ಮಂದಿ ಸಾವು –ಇಲ್ಲಿದೆ ಡಿಟೇಲ್ಸ್
ಆಕಸ್ಮಿಕವಾಗಿ ಒಂದು ಸೆಕೆಂಡ್ ಗಳ ಕಾಲವಷ್ಟೇ ಪ್ಲೇ ಆದ ಈ ಪೈಶಾಚಿಕ ದೃಶ್ಯದ ವಿಡಿಯೋ ಸದ್ಯ ಭಾರಿ ವೈರಲ್ ಆಗಿದೆ. 3.12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.