ಆವಿಷ್ಕಾರವನ್ನೇ ಜೀವನ ಮಾಡಿಕೊಂಡಿರುವ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೊಟ್ಗಳನ್ನು ಅಭಿವೃದ್ಧಿಪಡಿಸಿ, ಮಾನವರಿಗೆ ದೈಹಿಕ ಶ್ರಮದ ಕೆಲಸದಲ್ಲಿ ನೆರವಾಗುವಂತೆ ಮಾಡಲು ನೋಡುತ್ತಿದ್ದಾರೆ.
ತಮ್ಮ ಟೆಸ್ಲಾ ಕಂಪನಿಯು ಈ ಮಾನವ ರೋಬೊಟ್ ಅಭಿವೃದ್ಧಿಪಡಿಸುತ್ತಿದ್ದು, ಭವಿಷ್ಯದಲ್ಲಿ ಆರ್ಥಿಕತೆಗಳ ಮೇಲೆ ಇದು ಪ್ರಭಾವ ಬೀರಬಲ್ಲದು ಎಂದು ಮಸ್ಕ್ ತಿಳಿಸಿದ್ದಾರೆ.
ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್ ಬಹಳ ಫ್ಯಾಶನಬಲ್ ಅಂತೆ
ಟೆಸ್ಲಾ ಬೊಟ್ ಎಂದು ಕರೆಯಲಾಗುವ ಈ ರೋಬೊಟ್, ಐದು ಅಡಿ ಎಂಟು ಇಂಚು ಉದ್ದವಿರಲಿದ್ದು, 125 ಪೌಂಡ್ ತೂಗಲಿದೆ. ಪ್ರತಿ ಗಂಟೆಗೆ ಎಂಟು ಕಿಮೀ ನಡೆಯಲಿರುವ ಈ ರೋಬೊಟ್, ಮಾನವರು ಆರಾಮಾಗಿ ವಾಕ್ ಮಾಡಿದಂತೆ ಮಾಡಬಲ್ಲದು. 45 ಪೌಂಡ್ಗಳಷ್ಟು ತೂಕ ಎತ್ತುವ ಸಾಮರ್ಥ್ಯ ಪ್ರತಿ ರೋಬೊಟ್ಗೆ ಇರಲಿದೆ. ಮುಖದ ಬದಲಿಗೆ ಡಿಸ್ಪ್ಲೇ ಸ್ಕ್ರೀನ್ ಒಂದನ್ನು ಈ ರೋಬೊಟ್ ಹೊಂದಬಲ್ಲದು.
ಈ ರೋಬೊಟ್ಗಳು ಮಾನವರು ಮಾಡಲು ಕಷ್ಟಪಡುವ ಅನೇಕ ದೈಹಿಕ ಕೆಲಸಗಳನ್ನು ಮಾಡಲಿದೆ ಎಂದಿದ್ದಾರೆ ಮಸ್ಕ್.