ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಸಾಲವನ್ನು ಆರಂಭಿಸಿದೆ. ಇದಕ್ಕೆ ಎಸ್ಬಿಐ, ಕವಚ್ ಪರ್ಸನಲ್ ಲೋನ್ ಎಂದು ಹೆಸರಿಟ್ಟಿದೆ. ಈ ವಿಶೇಷ ಸಾಲದಲ್ಲಿ, ಬ್ಯಾಂಕ್ ತನ್ನ ಗ್ರಾಹಕ ಮತ್ತು ಗ್ರಾಹಕರ ಕುಟುಂಬ ಸದಸ್ಯರಿಗೆ ಕೊರೊನಾ ಚಿಕಿತ್ಸಾ ವೆಚ್ಚವನ್ನು ಸಾಲದ ರೂಪದಲ್ಲಿ ನೀಡಲಿದೆ.
ಎಸ್ಬಿಐ ಪ್ರಕಾರ, ಕವಚ್ ಪರ್ಸನಲ್ ಲೋನ್‌ನ ಉದ್ದೇಶವು,ಕೊರೊನಾದಿಂದ ಉಂಟಾಗುವ ವೆಚ್ಚಗಳಿಂದ ಗ್ರಾಹಕರಿಗೆ ಪರಿಹಾರ ನೀಡುವುದಾಗಿದೆ. ಈ ಸಾಲದ ಅಡಿಯಲ್ಲಿ, ಗ್ರಾಹಕರು ಮತ್ತು ಅವರ ಕುಟುಂಬ ಸದಸ್ಯರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಬ್ಯಾಂಕ್ ಭರಿಸಲಿದೆ.
ಎಸ್‌ಬಿಐನ ಈ ವಿಶೇಷ ಯೋಜನೆಯಲ್ಲಿ, ಗ್ರಾಹಕರು ಸಾಲವನ್ನು ತೆಗೆದುಕೊಳ್ಳುವಾಗ ಯಾವುದೇ ರೀತಿಯ ಆಸ್ತಿಯನ್ನು ಠೇವಣಿ ಮಾಡುವ ಅಗತ್ಯವಿಲ್ಲ. ಐದು ವರ್ಷಗಳವರೆಗೆ ಐದು ಲಕ್ಷ ರೂಪಾಯಿ ಸಾಲವನ್ನು ನೀಡಲಾಗುತ್ತದೆ. ಕನಿಷ್ಠ 25 ಸಾವಿರ ರೂಪಾಯಿ ಸಾಲವನ್ನು ತೆಗೆದುಕೊಳ್ಳಬಹುದು. ಇದಕ್ಕೆ ಬ್ಯಾಂಕ್ ಶೇಕಡಾ 8.5ರಷ್ಟು ಬಡ್ಡಿ ವಿಧಿಸುತ್ತದೆ.
ಎಸ್ಬಿಐ ಈ ಸಾಲ ಸೌಲಭ್ಯದ ಅತಿದೊಡ್ಡ ವೈಶಿಷ್ಟ್ಯವೆಂದರೆ, ಯಾರು ಬೇಕಾದ್ರೂ ಈ ಯೋಜನೆಯ ಲಾಭವನ್ನು ಪಡೆಯಬಹುದು. ಪಿಂಚಣಿದಾರರು ಕೂಡ ಈ ಸಾಲದ ಲಾಭ ಪಡೆಯಬಹುದು.