alex Certify ಪಾಕ್ ಕ್ರಿಕೆಟ್​ ಅಭಿಮಾನಿಯ ಫೋಟೋ ಬಳಸಿ ಫೇಮಸ್​ ಆಯ್ತು ಈ ಇಂಗ್ಲಿಷ್​ ಪುಸ್ತಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಕ್ರಿಕೆಟ್​ ಅಭಿಮಾನಿಯ ಫೋಟೋ ಬಳಸಿ ಫೇಮಸ್​ ಆಯ್ತು ಈ ಇಂಗ್ಲಿಷ್​ ಪುಸ್ತಕ..!

ಇಂಟರ್ನೆಟ್​​ನಲ್ಲಿ ನಗೆಗಡಲಿನಲ್ಲಿ ತೇಲಿಸುವಂತಹ ಸಾಕಷ್ಟು ವಿಡಿಯೋಗಳು, ಫೋಟೋಗಳು, ಮೀಮ್ಸ್​ ಸಿಗುತ್ತಲೇ ಇರುತ್ತದೆ. ಈ ಹಿಂದೆ ಕೋಪದಲ್ಲಿದ್ದ ಪಾಕಿಸ್ತಾನಿ ಕ್ರಿಕೆಟ್​ ಅಭಿಮಾನಿಯ ಫೋಟೋವೊಂದು 2019ರಲ್ಲಿ ಭಾರೀ ಸದ್ದು ಮಾಡಿತ್ತು. ವಿಶೇಷ ಅಂದರೆ ಈಗಲೂ ಸಾಕಷ್ಟು ಟ್ರೋಲಿಗರು ಮೀಮ್​ ಪೇಜ್​ನವರು ಈ ಫೋಟೋವನ್ನು ಬಳಕೆ ಮಾಡ್ತಾರೆ.

ಇದೀಗ ಮತ್ತೊಮ್ಮೆ ಈ ಕೋಪಗೊಂಡಿರುವ ಪಾಕಿಸ್ತಾನಿ ಕ್ರಿಕೆಟ್​ ಅಭಿಮಾನಿಯ ಫೋಟೋ ಸುದ್ದಿಯಲ್ಲಿದೆ. ಅಂದಹಾಗೆ ಈ ಬಾರಿ ಈತ ಟ್ರೋಲ್​ ಪೇಜ್​ಗಳಲ್ಲಿ ಅಲ್ಲ. ಬದಲಾಗಿ ಇಂಗ್ಲೀಷ್​ ಪುಸ್ತಕವೊಂದರಲ್ಲಿ ಕೋಪ ಎಂದರೇನು ಎಂದು ತಿಳಿಸಲು ಈ ವ್ಯಕ್ತಿಯ ಫೋಟೋವನ್ನು ಬಳಸಲಾಗಿದೆ.

ಅಂಚೆ ಕಚೇರಿ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಮತ್ತಷ್ಟು ಸುಲಭ

ವಿಶ್ವಕಪ್​ ಪಂದ್ಯಾವಳಿಯ ವೇಳೆ ಸರೀಂ ಅಖ್ತರ್​ ನೀಡಿದ್ದ ಈ ಪೋಸ್​ ಐಸಿಸಿಯ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಇವರ ಮುಖ ಇಂಗ್ಲಿಷ್​​ ಪುಸ್ತಕದಲ್ಲಿಯೂ ಬಳಕೆಯಾಗ್ತಿದೆ. ಅನೇಕರು ಇದನ್ನು ನೋಡಿ ಬಿದ್ದು ಬಿದ್ದು ನಕ್ಕಿದ್ದರೆ ಇನ್ನು ಕೆಲವರು ಇದು ಯಾರೋ ಬೇಕಂತಲೆ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಅದೇನೆ ಇರ್ಲಿ ಈ ಪುಸ್ತಕದ ಮೂಲಕ ಪಾಕಿಸ್ತಾನಿ ಕ್ರಿಕೆಟ್​ ಅಭಿಮಾನಿ ಮತ್ತೊಮ್ಮೆ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸುತ್ತಿರೋದಂತೂ ಸತ್ಯ..!

https://twitter.com/msarimakhtar/status/1427735570697134082

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...