ನವದೆಹಲಿ: ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸೀಮಾ ಸುಂಕ ಶೇಕಡ 15 ರಷ್ಟು ಇದ್ದು, ಅದನ್ನು ಶೇಕಡ 7.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ಇಳಿಕೆ ಮಾಡುವ ಉದ್ದೇಶದಿಂದ ತೆರಿಗೆ ಕಡಿಮೆ ಮಾಡಲಾಗಿದೆ. ಸೀಮಾಸುಂಕ ಕಡಿತಗೊಳಿಸುವ ಜೊತೆಯಲ್ಲೇ ಪರೋಕ್ಷ ತೆರಿಗೆಗಳ ಕೇಂದ್ರ ಮಂಡಳಿ ವತಿಯಿಂದ ರಿಫೈನ್ಡ್ ಸೋಯಾ ಎಣ್ಣೆ ಮತ್ತು ರಿಫೈನ್ಡ್ ಸೂರ್ಯ ಕಾಂತಿ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ಶೇಕಡ 45 ರಿಂದ ಶೇಕಡ 37.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ. ನಿನ್ನೆಯಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಸೆಪ್ಟಂಬರ್ 30 ರವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.