alex Certify ಎಟಿಎಂನಲ್ಲಿ ಹಣ ಇರೋದಿಲ್ಲವೇ..? ಹಾಗಾದಲ್ಲಿ ಬ್ಯಾಂಕ್​​ ಗೆ ವಿಧಿಸಬಹುದು 10,000 ರೂ. ದಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂನಲ್ಲಿ ಹಣ ಇರೋದಿಲ್ಲವೇ..? ಹಾಗಾದಲ್ಲಿ ಬ್ಯಾಂಕ್​​ ಗೆ ವಿಧಿಸಬಹುದು 10,000 ರೂ. ದಂಡ..!

ಡ್ರೈ ಎಟಿಎಂ ವಿರುದ್ಧ ಆರ್​ಬಿಐ ಹೊಸದೊಂದು ನಿಯಮಾವಳಿಯನ್ನು ಸಿದ್ಧಪಡಿಸಿದೆ. ಯಾವ ಎಟಿಎಂಗಳಲ್ಲಿ ನಗದು ಲಭ್ಯ ಇರೋದಿಲ್ಲವೋ ಅಂತಹ ಎಟಿಎಂಗಳನ್ನು ಡ್ರೈ ಎಟಿಎಂ ಎಂದು ಕರೆಯಲಾಗುತ್ತದೆ. ಯಾವುದೇ ಗ್ರಾಹಕ ಎಟಿಎಂನಲ್ಲಿ ಡೆಬಿಟ್​ ಕಾರ್ಡ್​ ಹಾಕಿದ ಬಳಿಕ ಅವರಿಗೆ ಹಣ ಸಿಗಲಿಲ್ಲ ಬದಲಾಗಿ ಎಟಿಎಂನಲ್ಲಿ ಹಣ ಇಲ್ಲ ಎಂಬ ಸಂದೇಶ ನಿಮಗೆ ಗೋಚರವಾಯ್ತು ಎಂದಾದಲ್ಲಿ ಅದನ್ನು ಡ್ರೈ ಎಟಿಎಂ ಎಂದು ಪರಿಗಣಿಸಬಹುದು. ಈ ವಿಚಾರವಾಗಿ ಹೇಳಿಕೆ ನೀಡಿರುವ ರಿಸರ್ವ್ ಬ್ಯಾಂಕ್​, ಯಾವ ಬ್ಯಾಂಕುಗಳು ಡ್ರೈ ಎಟಿಎಂ ಹೊಂದಿರುತ್ತವೆಯೂ ಅಂತಹ ಬ್ಯಾಂಕುಗಳ ವಿರುದ್ಧ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ ರಿಸರ್ವ್​ ಬ್ಯಾಂಕ್​ ಟ್ವಿಟರ್​ ಅಥವಾ ಫೇಸ್​ಬುಕ್​​ ಪೇಜ್​ ಹೊರತುಪಡಿಸಿ 011 23711333 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ಬ್ಯಾಂಕುಗಳನ್ನು ಹೊರತುಪಡಿಸಿ ವೈಟ್​​ ಲೇಬಲ್​ ಎಟಿಎಂ ಆಪರೇಷನ್​(WLAO)ಗಳಿಗಾಗಿಯೂ ರಿಸರ್ವ್ ಬ್ಯಾಂಕ್​ ಹೊಸ ನಿಯಮ ಜಾರಿ ಮಾಡಿದೆ.WLAO ಕಂಪನಿಯ ಮೂಲಕ ವಿವಿಧ ಬ್ಯಾಂಕುಗಳ ಎಟಿಎಂನಲ್ಲಿ ಹಣ ಹಾಕಲಾಗುತ್ತದೆ. ಎಟಿಎಂನಲ್ಲಿ ಹಣ ಇದೆಯೋ ಇಲ್ಲವೋ ಅನ್ನೋದನ್ನ ನಿಗಾ ವಹಿಸೋದು ಬ್ಯಾಂಕುಗಳ ಕರ್ತವ್ಯವಾಗಿದೆ. ಯಾವ ಬ್ಯಾಂಕ್​ ಈ ನಿಯಮ ಪಾಲಿಸುವುದಿಲ್ಲವೋ ಅಂತಹ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹೊಸ ನಿಯಮವು ಅಕ್ಟೋಬರ್​ 1ನೇ ತಾರೀಖಿನಿಂದ ಜಾರಿಗೆ ಬರಲಿದೆ. ಎಟಿಎಂಗಳಲ್ಲಿ ಯಾವಾಗಲು ಹಣ ಇರಬೇಕು ಹಾಗೂ ಹಣವಿಲ್ಲದ ಎಟಿಎಂಗಳಿಂದ ಜನರು ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಆರ್​ಬಿಐ ಈ ನಿಯಮ ರೂಪಿಸಿದೆ.

ಬ್ಯಾಂಕುಗಳು ಯಾವುದೇ ಕಾರಣಕ್ಕೂ ಎಟಿಎಂನಲ್ಲಿ ಹಣ ಖಾಲಿ ಇರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ WLAOಗಳಿಗೆ ಬ್ಯಾಂಕ್​ ಸದಾ ಸೂಚನೆ ನೀಡುತ್ತಲೇ ಇರಬೇಕು. ನಗದು ಖಾಲಿಯಾದ ಎಟಿಎಂಗಳಲ್ಲಿ ದಂಡದಿಂದ ಪಾರಾಗುವ ಸಲುವಾಗಿಯಾದರೂ ಕನಿಷ್ಟ ಹಣವನ್ನು ಇಡುವಂತೆ WLAO ಗಳಿಗೆ ಆಯಾ ಬ್ಯಾಂಕ್​ ಸೂಚನೆ ನೀಡಬೇಕೆಂದು ಆರ್​ಬಿಐ ಹೇಳಿದೆ.

ಕ್ರೀಡೆಯಲ್ಲಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ‘ಅಮೃತ ಕ್ರೀಡಾ ಯೋಜನೆ’ಗೆ ಒಪ್ಪಿಗೆ

ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ವ್ಯಕ್ತಿಗೆ ಹಣ ಸಿಗದೇ ಹೋದ ಸಮಯದಲ್ಲಿ ಮಾತ್ರ ಬ್ಯಾಂಕುಗಳಿಗೆ ಈ ದಂಡ ವಿಧಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ ಬ್ಯಾಂಕ್​ ಮೇಲೆ ನೇರವಾಗಿ ಆರ್​ಬಿಐ ಬಳಿ ದೂರನ್ನು ಸಲ್ಲಿಸಬಹುದಾಗಿದೆ. ಒಂದು ದಿನದಲ್ಲಿ 10 ಗಂಟೆಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ಹಣ ಖಾಲಿ ಇರುವಂತಿಲ್ಲ. ಈ ಸಮಯಾವಕಾಶವನ್ನು ಮೀರಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಆರ್​ಬಿಐ ಹೇಳಿದೆ. ಈ ದಂಡದ ಮೊತ್ತವನ್ನು ಬ್ಯಾಂಕ್​ ಬಳಿಕ WLAO ನಿಂದ ವಸೂಲಿ ಮಾಡಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...