ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಜನರನ್ನು ಬಂಧಿಸಿ ಅವರ ಮೇಲೆ ಚಾರ್ಜ್ಶೀಟ್ ಹಾಕಬೇಡಿ ಎಂದು ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಹೇಳಿದೆ.
ಬಂಧನದಿಂದಾಗಿ ವ್ಯಕ್ತಿಯ ಸಾಮಾಜಿಕ ಪ್ರತಿಷ್ಠೆ ಹಾಗೂ ಸ್ವಾಭಿಮಾನಕ್ಕೆ ಅತಿಯಾದ ಹಾನಿ ಉಂಟಾಗಬಹುದು. ಹೀಗಾಗಿ ನಿಮಗೆ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಬಂಧನವನ್ನು ಒಂದು ಸಾಮಾನ್ಯ ವಿಷಯದಂತೆ ಪರಿಗಣಿಸಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದೆ.
ವೈಯಕ್ತಿಕ ಸ್ವಾತಂತ್ರ್ಯ ಅನ್ನೋದು ಸಂವಿಧಾನದ ಪ್ರಮುಖ ಅಂಶವಾಗಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಹೃಷಿಕೇಶ್ ನೇತೃತ್ವದ ನ್ಯಾಯಪೀಠ ಹೇಳಿದೆ.
ವ್ಯಕ್ತಿಯನ್ನು ಜೈಲಿಗಟ್ಟದೆಯೇ ತನಿಖೆ ಪೂರ್ಣಗೊಳಿಸುವ ಅವಕಾಶ ಇರುವಂತಹ ಸಂದರ್ಭದಲ್ಲಿಯೂ ಅಮಾಯಕರನ್ನ ಜೈಲಿಗೆ ಕಳಿಸೋದು ತಪ್ಪು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.