alex Certify ಕೇವಲ 4 ನಿಮಿಷದಲ್ಲಿ 2.5 ಕೆಜಿಗೂ ಅಧಿಕ ತೂಕದ ಬರ್ಗರ್​ ತಿಂದು ತೇಗಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 4 ನಿಮಿಷದಲ್ಲಿ 2.5 ಕೆಜಿಗೂ ಅಧಿಕ ತೂಕದ ಬರ್ಗರ್​ ತಿಂದು ತೇಗಿದ ಭೂಪ..!

ಕೇವಲ ನಾಲ್ಕು ನಿಮಿಷ 10 ಸೆಕೆಂಡ್​ ಸಮಯಾವಕಾಶದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 20 ಸಾವಿರ ಕ್ಯಾಲೋರಿ ಹೊಂದಿರುವ ಬರ್ಗರ್​​ ತಿನ್ನುವ ಮೂಲಕ ದಾಖಲೆ ನಿರ್ಮಿಸಿದ್ದಾರೆ..! ಲಾಸ್​ ವೇಗಾಸ್​ನಲ್ಲಿರುವ ಹಾರ್ಟ್​ ಅಟ್ಯಾಕ್​ ಗ್ರಿಲ್​ಗೆ ಭೇಟಿ ನೀಡಿದ ಮ್ಯಾಟ್​ ಸ್ಟೋನಿ ಎಂಬವರು ಆಕ್ಟೋಪಲ್​ ಬೈಪಾಸ್​ ಚಾಲೆಂಜ್​​ನಲ್ಲಿ ಭಾಗಿಯಾದರು.

ಈ ವಿಶೇಷ ಬರ್ಗರ್​ 40 ಮಾಂಸದ ಸ್ಲೈಸ್​ಗಳು, 8.5 ಪ್ಯಾಟೀಸ್​ (patties), 16 ಚೀಸ್​ ಸ್ಲೈಸ್​​, 1 ಈರುಳ್ಳಿ, 1 ಟೊಮ್ಯಾಟೋ, ಮೆಣಸು ಹಾಗೂ ಬನ್​ಗಳನ್ನು ಹೊಂದಿತ್ತು. ಈ ದೊಡ್ಡ ಬರ್ಗರ್​ 2.94 ಕೆಜಿ ತೂಕ ಹೊಂದಿತ್ತು.

ಈ ಆಕ್ಟೋಪಲ್​ ಬೈಪಾಸ್​ ಬರ್ಗರ್​ನ ಬೆಲೆ 1787.70 ರೂಪಾಯಿ ಆಗಿದೆ. ಹಾಗೂ ಹೆಚ್ಚುವರಿ 40 ಮಾಂಸದ ತುಂಡುಗಳ ಬೆಲೆ 550 ರೂಪಾಯಿ ಆಗಿದೆ.
ಮ್ಯಾಟ್​​ ಕೇವಲ 4 ನಿಮಿಷ 10 ಸೆಕೆಂಡ್​ಗಳಲ್ಲಿ ಈ ಬರ್ಗರ್​ಗಳನ್ನು ತಿಂದು ತೇಗಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...