alex Certify 2ನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಿಗೆ ಕೊರೊನಾ ಸೋಂಕು, ಕೇರಳದಲ್ಲೇ ಗರಿಷ್ಠ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2ನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಿಗೆ ಕೊರೊನಾ ಸೋಂಕು, ಕೇರಳದಲ್ಲೇ ಗರಿಷ್ಠ!

ನವದೆಹಲಿ: ಕೊರೊನಾ ಸೋಂಕು ಸದ್ಯದ ಮಟ್ಟಿಗೆ ನಮ್ಮನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ, ಕೊರೊನಾ ತಡೆ ಲಸಿಕೆಯ ಎರಡನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಲ್ಲಿ ಕೊರೊನಾ ಸೋಂಕು ಪುನಃ ಕಾಣಿಸಿಕೊಂಡಿದೆ. ಇದು ಕೊರೊನಾ ತಳಿಗಳು, ರೂಪಾಂತರಿಗಳಿಂದ ಉಂಟಾಗಿರಬಹುದು. ಇಲ್ಲವೇ ಲಸಿಕೆ ಪಡೆದವರಲ್ಲಿ ರೋಗ ನಿರೋಧಕತೆ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸಮಜಾಯಿಷಿ ನೀಡಿದೆ.
ಇನ್ನೂ ಗಾಬರಿಯ ಸಂಗತಿ ಎಂದರೆ, ಎರಡನೇ ಡೋಸ್ ಬಳಿಕವೂ ದೇಶಾದ್ಯಂತ ಕೊರೊನಾಗೆ ತುತ್ತಾದವರ ಪೈಕಿ ಅತಿಹೆಚ್ಚು ಮಂದಿ ಕರ್ನಾಟಕದ ನೆರೆ ರಾಜ್ಯ ಕೇರಳದಲ್ಲಿದ್ದಾರೆ!

ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸರ್ಕಾರ; ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ

ಹೌದು, ಶೇ. 46 ರಷ್ಟು ಸೋಂಕಿತರು ಕೇರಳದವರು. ಸುಮಾರು 200 ಸೋಂಕಿತರಿಂದ ರಕ್ತ, ಬಾಯಿಯಲ್ಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಕೂಲಂಕಷ ಅಧ್ಯಯನಕ್ಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವರೇ ಖುದ್ದಾಗಿ ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಿಗಾ ವಹಿಸಿದ್ದಾರೆ. ಕೇರಳದಲ್ಲಿ ಶೇ. 100ರಷ್ಟು ಜನರು ಲಸಿಕೆ ಪಡೆದಿರುವ ವಯನಾಡ್‍ನಲ್ಲಿ ಕೂಡ ಕೊರೊನಾ ಪ್ರಕರಣಗಳು ಪುನಃ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...