ನವದೆಹಲಿ: ತೈಲ ಕಂಪನಿಗಳು ಇಂದು ಇಂಧನ ದರ ಪರಿಷ್ಕರಣೆ ಮಾಡಿದ್ದು, ಸತತ ಮೂರನೇ ದಿನವೂ ಡೀಸೆಲ್ ಬೆಲೆ ಇಳಿಕೆಯಾಗಿದೆ.
ಇಂದು ಡೀಸೆಲ್ ದರವನ್ನು ಲೀಟರ್ ಗೆ 25 ಪೈಸೆಯಷ್ಟು ಕಡಿಮೆ ಮಾಡಿದ್ದು, ಪೆಟ್ರೋಲ್ ಬೆಲೆ 24 ದಿನಗಳಿಂದ ಬದಲಾಗದೇ ಉಳಿದಿದೆ. ನಾಲ್ಕು ಮೆಟ್ರೋ ನಗರಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಮನಿಸಿದಾಗ, ಮುಂಬೈನಲ್ಲಿ ಅತಿ ಹೆಚ್ಚು ಎಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರ ಹೇಳಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯಿಂದಾಗಿ ರಾಜ್ಯಗಳಾದ್ಯಂತ ಇಂಧನ ದರಗಳು ಬದಲಾಗುತ್ತವೆ.
ಡೀಸೆಲ್ ಬೆಲೆಯನ್ನು ಸತತ ಮೂರನೇ ದಿನವೂ 25 ಪೈಸೆಗಳಷ್ಟು ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್ಗೆ 101.84 ರೂ. ಇದೆ. ಡೀಸೆಲ್ ದರ ಪ್ರತಿ ಲೀಟರ್ಗೆ 89.47 ರೂ.ನಿಂದ 89.27 ರೂ.ಗೆ ಇಳಿದಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.
ಮುಂಬೈನಲ್ಲಿ, ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್ಗೆ 107.83 ರೂ. ಇದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 96.84 ರೂ. ಆಗಿದೆ.