alex Certify ಸಿಖ್ಖರು, ಹಿಂದೂಗಳ ರಕ್ಷಣೆಯ ಅಭಯ ನೀಡಿದ ತಾಲಿಬಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಖ್ಖರು, ಹಿಂದೂಗಳ ರಕ್ಷಣೆಯ ಅಭಯ ನೀಡಿದ ತಾಲಿಬಾನ್

“ಅಫ್ಘಾನಿಸ್ತಾನದಲ್ಲಿರುವ ಸಿಖ್ಖರು ಹಾಗೂ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದ್ದು, ಯಾರೂ ಹೆದರಬೇಕಾದ ಅಗತ್ಯವಿಲ್ಲ” ಎಂದು ಕಾಬೂಲ್‌ ಗುರುದ್ವಾರಾದ ಮುಖ್ಯಸ್ಥರು ಕೊಟ್ಟಿರುವ ಹೇಳಿಕೆಯೊಂದರ ವಿಡಿಯೋವನ್ನು ತಾಲಿಬಾನ್‌ನ ವಕ್ತಾರನೊಬ್ಬ ಶೇರ್‌ ಮಾಡಿಕೊಂಡಿದ್ದಾನೆ.

ಸೌದಿ ಅರೇಬಿಯಾದ ಅಲ್‌-ಜ಼ಜೀರಾ ವಾಹಿನಿಯಲ್ಲಿ ಬಿತ್ತರಗೊಂಡಿದ್ದ ಈ ವಿಡಿಯೋವನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಕ್ತಾರ ಎಂ ನಯೀಮ್ ಟ್ವೀಟ್ ಮಾಡಿದ್ದಾನೆ.

ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜೀಂದರ್‌ ಸಿಂಗ್ ಸಿರ್ಸಾ ಈ ವಿಡಿಯೋವನ್ನು ಶೇರ್‌ ಮಾಡಿದ್ದು, “ಕಾಬೂಲ್ ಗುರುದ್ವಾರದೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಹಿಂದೂಗಳು ಹಾಗೂ ಸಿಖ್ಖರನ್ನು ಭೇಟಿಯಾದ ತಾಲಿಬಾನ್ ನಾಯಕರು ಅವರು ಸುರಕ್ಷಿತವಾಗಿರಲಿದ್ದಾರೆ ಎಂದು ಖಾತ್ರಿ ಪಡಿಸಿದ್ದಾರೆ” ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ಖಜಾನೆ ದುಡ್ಡನ್ನು ಮುಟ್ಟಲು ತಾಲಿಬಾನ್‌ ಗೆ ಸಾಧ್ಯವಿಲ್ಲ….!

“ಸಿಖ್ಖರು ಹಾಗೂ ಭಾರತೀಯರು ಕಾಬೂಲ್‌ನಲ್ಲಿ ಹೀಗಿದ್ದಾರೆ: ಅವರ ದೇವಸ್ಥಾನದ ಮುಖ್ಯಸ್ಥರು ಹೇಳುತ್ತಾರೆ ನಾವು ಸುರಕ್ಷಿತವಾಗಿದ್ದೇವೆ…..ಯಾವುದೇ ಭಯ ಅಥವಾ ಆತಂಕ ಬೇಡ. ಇದಕ್ಕೂ ಮುನ್ನ ಜನರು ತಮ್ಮ ಜೀವಗಳಿಗೆ ಹೆದರಿದ್ದರು. ಈಗ ಅಂತಹ ಸಮಸ್ಯೆಗಳಿಲ್ಲ. ನಮಗೆ ಸ್ಪಷ್ಟವಿದೆ” ಎಂದು ನಯೀಮ್ ಮಾಡಿರುವ ಟ್ವೀಟ್ ತಿಳಿಸುತ್ತಿದೆ.

“ಕಾಬೂಲ್‌ನಲ್ಲಿರುವ ಸಿಖ್ ಹಾಗೂ ಹಿಂದೂ ಸಮುದಾಯಗಳ ನಾಯಕರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಅವರ ಹಿತಾಸಕ್ತಿಗಳು ನಮ್ಮ ಆದ್ಯತೆ ಪಡೆಯಲಿವೆ” ಎಂದು ಇದಕ್ಕೂ ಮುನ್ನ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಟ್ವೀಟ್ ಮಾಡಿದ್ದರು.

https://twitter.com/mssirsa/status/1428032650262978560?ref_src=twsrc%5Etfw%7Ctwcamp%5Etweetembed%7Ctwterm%5E1428032650262978560%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fafghanistan-news-sikhs-in-kabul-assured-of-safety-sikhs-in-kabul-gurudwara-in-video-shared-by-taliban-2513867

https://twitter.com/IeaOffice/status/1428065056869298182?ref_src=twsrc%5Etfw%7Ctwcamp%5Etweetembed%7Ctwterm%5E1428065056869298182%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fafghanistan-news-sikhs-in-kabul-assured-of-safety-sikhs-in-kabul-gurudwara-in-video-shared-by-taliban-2513867

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...