2 ದಶಕಗಳ ಬಳಿಕ ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ರಕ್ತದೋಕುಳಿಯನ್ನೇ ಹರಿಸುತ್ತಿದ್ದಾರೆ.
ತಾವು ಶಾಂತಿ ಕಾಪಾಡುತ್ತೇವೆ ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿಕೊಳ್ಳುತ್ತಿದ್ದರೂ ಸಹ ಇಲ್ಲಿಯ ಗ್ರೌಂಡ್ ರಿಪೋರ್ಟ್ ಬೇರೆಯದ್ದೇ ಇದೆ. ಜನಸಾಮಾನ್ಯರು ಮಾತ್ರವಲ್ಲದೇ ಕಾಬೂಲ್ ಹಾಗೂ ಜಲಾಲಬಾದ್ ಪ್ರಾಂತ್ಯಗಳಲ್ಲಿ ತಾಲಿಬಾನ್ ಉಗ್ರರು ಪತ್ರಕರ್ತರ ಮೇಲೂ ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಕಾಬೂಲ್ನಲ್ಲಿ ಸ್ಥಳೀಯರ ಜೊತೆ ಸಂದರ್ಶನ ನಡೆಸುತ್ತಿದ್ದ ಮಹಿಳಾ ಪತ್ರಕರ್ತೆ ಹಾಗೂ ಕ್ಯಾಮರಾಮನ್ ಮೇಲೆ ತಾಲಿಬಾನಿಗಳು ಬಂದೂಕು ತೋರಿಸಿದ್ದಾರೆ. ಮಾತ್ರವಲ್ಲದೇ ಪತ್ರಕರ್ತೆ ಕಪ್ಪು ಬಣ್ಣದ ಹಿಜಬ್ ಧರಿಸಿದ್ದರೂ ಸಹ ಆಕೆಗೆ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳುವಂತೆ ವಾರ್ನಿಂಗ್ ನೀಡಿದ್ದಾರೆ.
ಆಕ್ರಮಣಕಾರಿ ಬಂದೂಕುಗಳನ್ನು ಹೊಂದಿರುವ ತಾಲಿಬಾನಿಗಳು ಪ್ರೊಡ್ಯೂಸರ್ ಹಲ್ಲೆ ನಡೆಸಿದರು. ಆದರೆ ವರದಿ ಮಾಡಲು ಅನುಮತಿ ಇದೆ ಎಂದು ಅನುಮತಿ ಪತ್ರ ತೋರಿಸಿದ ಬಳಿಕ ತಾಲಿಬಾನಿಗಳು ಸುಮ್ಮನೇ ತೆರಳಿದ್ದಾರೆ.