alex Certify ಓಲಾ ಸ್ಕೂಟರ್ ಬಳಿಕ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಕಂಪನಿ ಸಜ್ಜು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಸ್ಕೂಟರ್ ಬಳಿಕ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಕಂಪನಿ ಸಜ್ಜು..!

ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಯಶಸ್ವಿ ಬಿಡುಗಡೆಯ ನಂತರ ಸದ್ಯದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಸಜ್ಜಾಗಿದೆ.

ಕಂಪನಿಯು 2 ವರ್ಷಗಳಲ್ಲಿ ಅಂದರೆ 2023 ರ ವೇಳೆಗೆ ಎಲೆಕ್ಟ್ರಿಕ್ ಕಾರು ಯೋಜನೆಗೆ ಕಾಲಿಡಬಹುದು ಎಂದು ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ.

ಆದರೂ ಕೂಡ ಭವಿಶ್ ಅಗರ್ವಾಲ್ ಅವರು ಕಂಪನಿಯ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಪ್ರಸ್ತುತ, ಓಲಾ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡದಿದ್ದರೂ ಅದರ ಸೋದರ ಸಂಸ್ಥೆಯಾಗಿರುವ ಓಲಾ ಕ್ಯಾಬ್ಸ್ ಭಾರತದ ಹಲವಾರು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಂಪನಿಯು ಅಂತಹ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಗೆ ಬಳಸುವ ಕೇಂದ್ರಗಳನ್ನು ಸಹ ನಿರ್ವಹಿಸುತ್ತದೆ.

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಪ್ರಸ್ತುತ ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ ಕೃಷ್ಣಗಿರಿ ಸ್ಥಾವರವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ಅಗರ್ವಾಲ್ ಬಹಿರಂಗಪಡಿಸಿದರು. ಕಂಪನಿಯು ಭವಿಷ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಉತ್ಪಾದನಾ ಕೇಂದ್ರಗಳನ್ನು ಬಳಸುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಭವಿಷ್ಯದಲ್ಲಿ ದೇಶವನ್ನು ಎಲೆಕ್ಟ್ರಿಕ್ ವಾಹನಗಳ ಕೇಂದ್ರವಾಗಿ ಪರಿವರ್ತಿಸಲು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಹೂಡಿಕೆ ಮಾಡುವಂತೆ ಆಟೋಮೊಬೈಲ್ ಉದ್ಯಮಕ್ಕೆ ಅಗರ್ವಾಲ್ ಅವರು ಈ ವೇಳೆ ಒತ್ತಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...