alex Certify BIG NEWS: 3316 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಉದ್ಯಮಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3316 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಉದ್ಯಮಿ ಅರೆಸ್ಟ್

ಮನಿ ಲ್ಯಾಂಡರಿಂಗ್​ ಪ್ರಕರಣ ಹಾಗೂ ಸಾರ್ವಜನಿಕ ಬ್ಯಾಂಕುಗಳಿಗೆ ಬರೋಬ್ಬರಿ 3316 ಕೋಟಿ ರೂಪಾಯಿ ನಷ್ಟ ಮಾಡಿದ ಆರೋಪದ ಅಡಿಯಲ್ಲಿ ಪ್ರಥ್ವಿ ಇನ್​ಫಾರ್ಮೇಷನ್​ ಸಲ್ಯೂಷನ್​ ಲಿಮಿಟೆಡ್​​ನ ಎಂಡಿ ವುಪ್ಪಲಪತಿ ಸತೀಶ್​ ಕುಮಾರ್​​ರನ್ನು ಬಂಧಿಸಿರೋದಾಗಿ ಜಾರಿ ನಿರ್ದೇಶನಾಲಯ ಗುರುವಾರ ಮಾಹಿತಿ ನೀಡಿದೆ.

ಇಡಿ ಅಧಿಕಾರಿಗಳು ಸತೀಶ್​ ಕುಮಾರ್ ​​ರನ್ನು ಆಗಸ್ಟ್​ 12ರಂದು ವಶಕ್ಕೆ ಪಡೆದಿತ್ತು ಹಾಗೂ ಆಗಸ್ಟ್​​​ 18ರವರೆಗೆ ಕಸ್ಟಡಿಗೆ ಪಡೆದುಕೊಂಡಿರೋದಾಗಿ ಹೇಳಿದೆ.
ವಿಎಂಸಿ ಸಿಸ್ಟಂ ಲಿಮಿಟೆಡ್​​ನ ಎಂಡಿ ಹೀಮಾ ಬಿಂದು ಅವರ ಸಹಾಕರದಿಂದ ಬ್ಯಾಂಕ್​ ಒಕ್ಕೂಟಗಳಿಗೆ ಸುಮಾರು 3316 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಕಾರಣಕ್ಕಾಗಿ ಕುಮಾರ್​ರನ್ನು ಮನಿಲ್ಯಾಂಡರಿಂಗ್​ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಂದು ಎಂಬವರು ಕುಮಾರ್​ರ ಸಹೋದರಿ ಆಗಿದ್ದು ಇವರನ್ನೂ ಸಹ ಇದೇ ತಿಂಗಳ 5ನೇ ತಾರೀಖಿನಂದು ಬಂಧಿಸಲಾಗಿತ್ತು.

ಕಂಪನಿಯ ವಿರುದ್ಧ ಸಿಬಿಐ ದಾಖಲಿಸಿದ ಎಫ್​ಐಆರ್​ನ್ನು ಆಧರಿಸಿದ ಜಾರಿ ನಿರ್ದೇಶನಾಲಯ ಈ ತನಿಖೆಯನ್ನು ಕೈಗೆತ್ತಿಕೊಂಡಿರೋದಾಗಿ ಹೇಳಿದೆ. ವಿಎಂಸಿಎಸ್​​ಎಲ್​​ ವಿವಿಧ ಸಾರ್ವಜನಿಕ ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದುಕೊಂಡಿದೆ. ಪ್ರಸ್ತುತ ಈ ಕಂಪನಿಯು 3316 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ.

ಯಾವುದೇ ಸಂಬಂಧವೇ ಇಲ್ಲದೇ ಇದ್ದರೂ ಸಹ ಬಿಎಸ್​ಎನ್​ಎಲ್​​ ಟೆಂಡರ್​ನಿಂದ ವಿಎಂಸಿಎಸ್​ಎಲ್​ ಕಂಪನಿಯು ಪಿಐಎಸ್​ಎಲ್​ ಶೇಕಡಾ ಮೂರು ಪ್ರತಿಶತ ಕಮಿಷನ್​ ನೀಡಿರುವ ವಿಚಾರ ವಿಧಿವಿಜ್ಞಾನ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...