alex Certify ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಪೋಲಿಯೋ ಮಾದರಿಯ ಭಯಾನಕ ರೋಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಪೋಲಿಯೋ ಮಾದರಿಯ ಭಯಾನಕ ರೋಗ..!

ಮುಂದಿನ ನಾಲ್ಕು ತಿಂಗಳೊಳಗಾಗಿ ಪೋಲಿಯೋ ರೀತಿಯ ಕಾಯಿಲೆಯಾದ ಎಕ್ಯೂಟ್​​ ಫ್ಲಾಸಿಡ್​ ಮೈಲೈಟಿಸ್​​ ಎಂಬ ರೋಗವು ಏಕಾಏಕಿ ಹರಡಲಿದೆ ಎಂದು ಪೋಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಮೆರಿಕ ಎಚ್ಚರಿಕೆ ನೀಡಿದೆ.

ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಸಿ.ಡಿ.ಸಿ. ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ದಿಢೀರ್​ ಅಂಗ ದೌರ್ಬಲ್ಯ ಹೊಂದುವ ಮಕ್ಕಳು ಅದರಲ್ಲೂ ವಿಶೇಷವಾಗಿ ಆಗಸ್ಟ್​ನಿಂದ ನವೆಂಬರ್ ತಿಂಗಳಲ್ಲಿ ಈ ಲಕ್ಷಣಗಳು ಮಕ್ಕಳಲ್ಲಿ ಗೋಚರಿಸಿದಲ್ಲಿ ಪೋಷಕರು ಜಾಗ್ರತರಾಗಬೇಕು. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಜ್ವರ ಅಥವಾ ಕುತ್ತಿಗೆ, ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ನರವೈದ್ಯರನ್ನು ಭೇಟಿಯಾಗಬೇಕು ಎಂದು ಸಿ.ಡಿ.ಸಿ. ಹೇಳಿದೆ.

ಎಎಫ್​ಎಂ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಈ ಕಾಯಿಲೆಯಿಂದ ಬಳಲುವ ಮಗುವಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕೊರೊನಾ ವೈರಸ್​ ಜಾಸ್ತಿ ಇರುವ ಪ್ರದೇಶವಾದರೂ ಸಹ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಈ ಬಾರಿ ಕೊರೊನಾವನ್ನು ತಡೆಗಟ್ಟುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಎಫ್​ಎಂ ಮಂದಗತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಾರ್ಶ್ವವಾಯುವಿಗೆ ಕಾರಣವಾಗುವ ಈ ನರದೌರ್ಬಲ್ಯ ಕಾಯಿಲೆಯು 2014ರ ಬಳಿಕ ಪ್ರತಿ 2 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿದೆ. 2018ರಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 42 ರಾಜ್ಯಗಳಲ್ಲಿ 238 ಪ್ರಕರಣಗಳು ವರದಿಯಾಗಿತ್ತು. ಇದರಲ್ಲಿ 95 ಪ್ರತಿಶತ ಮಕ್ಕಳೇ ಇದ್ದರು ಎಂದು ಪ್ರಕಟಣೆ ಹೇಳಿದೆ.

ಈ ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಮುಂಜಾಗ್ರತಾ ಕ್ರಮ ಹಾಗೂ ತುರ್ತು ಚಿಕಿತ್ಸೆಯಿಂದ ಮಾತ್ರ ಇದರಿಂದ ಬಚಾವ್​ ಆಗಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...