ಕೊರೊನಾ ಸಂಕಷ್ಟದ ಬಳಿಕ ಚಿತ್ರರಂಗಗಳ ಪರಿಸ್ಥಿತಿಯೇ ಬದಲಾಗಿದೆ. ಕೊರೊನಾ ಹೊಡೆತದಿಂದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರೋದರ ನಡುವೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬೆಲ್ಬಾಟಂ ಸಿನಿಮಾ ಇಂದು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ಅನೇಕ ರಾಜ್ಯಗಳಲ್ಲಿ ಥಿಯೇಟರ್ಗಳನ್ನು ತೆರೆಯಲು ನಿರ್ಬಂಧಗಳು ಇನ್ನೂ ಇರೋದ್ರ ನಡುವೆಯೇ ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೇಕ್ಷಕರು ಈ ಸಿನಿಮಾದ ಕೈಹಿಡಿಯಬಹುದು ಎಂಬ ವಿಶ್ವಾಸದಲ್ಲಿದೆ ಬೆಲ್ಬಾಟಂ ಚಿತ್ರತಂಡ.
ಅಂಬಾನಿ ಶಂಕರ್ ನಿರ್ದೇಶನದ ಹಾಗೂ ಅಂಬಾ ಸಿನಿಮಾಸ್ ಬ್ಯಾನರ್ನಡಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಬಾಲಿವುಡ್ನ ಸಿನಿಮಾಗಳಿಗೆ ಹೆಚ್ಚಿನ ಲಾಭ ತಂದುಕೊಡುವ ಮಹಾರಾಷ್ಟ್ರದಲ್ಲೇ ಸಿನಿಮಾ ರಿಲೀಸ್ಗೆ ಅವಕಾಶವಿಲ್ಲ. ಅಂತದ್ರಲ್ಲಿ ನಿರ್ದೇಶಕ ಅಂಬಾನಿ ಶಂಕರ್ ದೆಹಲಿಯ ಹಳೆಯ ಥಿಯೇಟರ್ಗಳಲ್ಲಿ ಒಂದಾದ ಅಂಬಾ ಚಿತ್ರಮಂದಿರದಿಂದ ತಮ್ಮ ಭವಿಷ್ಯ ಬರೆದುಕೊಳ್ಳಲು ನಿರ್ಧರಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅಂಬಾ ಶಂಕರ್, ಕೊರೊನಾ ಸಂಕಷ್ಟದಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದೆಯೇ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು ಇದೀಗ ಅಲ್ಲಲ್ಲಿ ಚಿತ್ರಮಂದಿರಗಳ ಪುನಾರಂಭಕ್ಕೆ ಹಸಿರು ನಿಶಾನೆ ದೊರಕಿದೆ. ಸಾಮಾನ್ಯ ಸ್ಥಿತಿಗೆ ಮರಳುತ್ತೇವೆ ಎಂಬ ಆಶಯ ನಮ್ಮಲ್ಲಿದೆ. ಸರ್ಕಾರದಿಂದ ಸಿನಿಮಾರಂಗದವರಿಗೆ ಯಾವುದೇ ಬೆಂಬಲ ದೊರಕಿಲ್ಲ. ಚಿತ್ರಮಂದಿರಗಳು ಇನ್ನೂ ತೆರೆಯದೇ ಹೋಗಿದ್ದರೆ ನಮಗೆ ಬದುಕಲು ಕಷ್ಟವಾಗುತ್ತಿತ್ತು ಎಂದು ಹೇಳಿದ್ರು.
ಪ್ರಸ್ತುತ ಸನ್ನಿವೇಶದಲ್ಲಿ ಬೆಲ್ಬಾಟಂಗೆ ಬಾಕ್ಸಾಫೀಸ್ ಕಲೆಕ್ಷನ್ಗೆ ಸಂಕಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಬುಕ್ ಮೈ ಶೋದ ಸಿಇಒ ಆಶಿಸ್ ಸಕ್ಸೇನಾ, ಎನ್ಸಿಆರ್, ಹೈದರಾಬಾದ್, ಕೋಲ್ಕತ್ತಾ, ಭುವನೇಶ್ವರ, ಅಹಮದಾಬಾದ್, ಪಾಟ್ನಾ, ಸೂರತ್, ಬೆಂಗಳೂರು, ಇಂದೋರ್ ಹಾಗೂ ಲಕ್ನೋದಲ್ಲಿ ಹೆಚ್ಚಿನ ಪ್ರೇಕ್ಷಕರು ಬುಕ್ಕಿಂಗ್ ಮಾಡುತ್ತಾರೆ. ಆದರೆ ಇದೀಗ ಎಲ್ಲಾ ಚಿತ್ರಮಂದಿರಗಳು ತೆರೆಯದ ಕಾರಣ ವಾರಾಂತ್ಯದ ಗಳಿಕೆ ಎಷ್ಟಾಗಬಹುದು ಎಂಬುದನ್ನ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ದರೂ ಸಹ ಚಿತ್ರತಂಡ ಹೊಸ ಸಾಹಸಕ್ಕೆ ಕೈ ಹಾಕಿದೆ. ಇಂತಹ ಸಂದರ್ಭದಲ್ಲಿ ಸಿನಿಮಾ ರಿಲೀಸ್ಗೆ ಮುಂದಾದ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಬೆಲ್ಬಾಟಂ ಸಿನಿಮಾದ ಜಯವು ಇತರೆ ಸಿನಿಮಾಗಳ ನಿರ್ಮಾಪಕರಿಗೆ ಧೈರ್ಯ ತುಂಬಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದ್ರು.