ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ ರಜೆ ನೀಡಲಾಗುತ್ತೆ. ಒಂದು ವಾರಗಳವರೆಗೂ ಈ ರಜೆ ಪಡೆಯಬಹುದು. ಪತಿ-ಪತ್ನಿ ಮನೆಯಲ್ಲಿ ರೊಮ್ಯಾನ್ಸ್ ಮಾಡಲಿ ಎಂಬ ಕಾರಣಕ್ಕೆ ರಜೆ ನೀಡಲಾಗುತ್ತದೆ.
ಅಚ್ಚರಿಯಾದ್ರೂ ಇದು ಸತ್ಯ. ಈ ರಜಾ ಪದ್ಧತಿ ಜಪಾನಿನಲ್ಲಿದೆ. ಜಪಾನ್ ನಲ್ಲಿ ಜನಸಂಖ್ಯೆ ಕಡಿಮೆಯಿದೆ. ಜಪಾನ್ ಜನಸಂಖ್ಯೆ 126 ದಶಲಕ್ಷಕ್ಕಿಂತ ಕಡಿಮೆಯಾಗಿದೆ. ಜಪಾನ್ನ ಫಲವತ್ತತೆ ದರ ಶೇಕಡಾ 1.4ರಷ್ಟಿದೆ. ಇದರಿಂದ ವಿಚಲಿತರಾದ ಜಪಾನ್ ಸರ್ಕಾರ, ದಂಪತಿಗೆ ಸಾಧ್ಯವಾದಷ್ಟು ಮಕ್ಕಳನ್ನು ಪಡೆಯುವಂತೆ ಸಲಹೆ ನೀಡ್ತಿದೆ. ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಅಲ್ಲಿನ ಸರ್ಕಾರ, ದಂಪತಿಗೆ ವಿಶೇಷ ರಜೆ ನೀಡ್ತಿದೆ.
ಈ ರಜೆಯನ್ನು ಜಪಾನ್ನ ಎಲ್ಲಾ ಕಚೇರಿಗಳಲ್ಲಿ ನೀಡಲಾಗುವುದು. ದಂಪತಿ ಒಂದು ವರ್ಷದಲ್ಲಿ ಮಕ್ಕಳನ್ನು ಪಡೆಯಲು 10 ರಜಾದಿನಗಳನ್ನು ತೆಗೆದುಕೊಳ್ಳಬಹುದು. ಆಶ್ಚರ್ಯಕರ ಸಂಗತಿಯೆಂದರೆ ಈ ಸಮಯದಲ್ಲಿ ಸಂಬಳ ಕಡಿತಗೊಳ್ಳುವುದಿಲ್ಲ. ಜಪಾನ್ನಲ್ಲಿ ಯುವ ಜನರ ಸಂಖ್ಯೆ ಕಡಿಮೆಯಿದೆ. 2040 ರ ವೇಳೆಗೆ, ಜಪಾನ್ನ ಒಟ್ಟು ಜನಸಂಖ್ಯೆಯ ಶೇಕಡಾ 35ರಷ್ಟು ವೃದ್ಧರಿರಲಿದ್ದಾರೆ. ಜಪಾನ್ ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ ಜನಸಂಖ್ಯೆ ಕಡಿಮೆಯಾಗ್ತಿದೆ.