ಮಂಡ್ಯ: ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹಿಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರಿರುವ ಸುಮಲತಾ, ಅಕ್ರಮ ಗಣಿಗಾರಿಕೆ ನಿಂತಿರುವುದರಿಂದ ಅವರಿಗೆ ತೊಂದರೆಯಾಗಿದೆ. ಹೀಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸುಮಲತಾ, ಈವರೆಗೆ 8 ಬಾರಿ ದಿಶಾ ಸಭೆ ನಡೆಸಲಾಗಿದೆ. ಈವರೆಗೆ ಒಂದು ಸಭೆಗೂ ಹಾಜರಾಗದ ರವೀಂದ್ರ ಶ್ರೀಕಂಠಯ್ಯ ನಿನ್ನೆ ನಡೆದ ಸಭೆಗೆ ಹಾಜರಾಗಿದ್ದಾರೆ. ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಕೆಲಸಗಳಾಗಲಿ, ಕೋವಿಡ್ ಸಮಸ್ಯೆ ಬಗೆಹರಿಸುವುದಾಗಲಿ, ಅಕ್ರಮ ಗಣಿಗಾರಿಕೆಗಳನ್ನು ತಡೆಯುವುದಾಗಲಿ ಬೇಕಿಲ್ಲ. ಅವರ ಉದ್ದೇಶಗಳೇ ಬೇರೆ. ನಾನು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿ ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಪಾಪ ಇವರಿಗೆ ತೊಂದರೆಗಳಾಗುತ್ತಿವೆ ಹಾಗಾಗಿ ಮಾತನಾಡುತ್ತಿದ್ದಾರೆ ಎಂದರು.
ನವ ವಧು-ವರರಿಗೆ ಹಾಸ್ಯನಟ ಕೊಟ್ಟ ಗಿಫ್ಟ್ ಏನು ಗೊತ್ತಾ….?
ನನ್ನ ಸುತ್ತ ಗೂಂಡಾಗಳು, ಫ್ರಾಡ್ ಗಳಿದ್ದಾರೆ ಎಂಬ ರವೀಂದ್ರ ಶ್ರೀಕಂಠಯ್ಯನವರ ಹೇಳಿಕೆಯಿಂದಲೇ ಅವರ ಸಂಸ್ಕಾರ, ಸಂಸ್ಕೃತಿಗಳು ತೋರುತ್ತವೆ. ಯಾರೂ ಯಾವ ಅಧಿಕಾರಿಗಳನ್ನು ಬೆದರಿಸುತ್ತಲೂ ಇಲ್ಲ, ತಪ್ಪು ಮಾಡಿದ್ದರೆ ಭಯಪಡಬೇಕು ಹೊರತು ಮಾಡಿಲ್ಲವೆಂದರೆ ಭಯಪಡುವ ಅಗತ್ಯವಿಲ್ಲ. ನಮಗೆ ರಾಜಕಾರಣದಿಂದ ಬದುಕು, ಜೀವನ ನಡೆಸಬೇಕಾದ ಅಗತ್ಯವಿಲ್ಲ, ಜನಸೇವೆ ಎಂಬ ಮನೋಭಾವದಿಂದ ರಾಜಕಾರಣದಲ್ಲಿದ್ದೇವೆ ಎಂದು ಹೇಳಿದರು.