alex Certify ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….!

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಪಿಯೊಬ್ಬ,ಕುದಿಯುವ ನೀರನ್ನು ಪತ್ನಿ ಮೈಮೇಲೆ ಹಾಕಿದ್ದಾನೆ. ಗಂಡು ಮಗುವಿಗೆ ಪತ್ನಿ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಈ ಕೃತ್ಯವೆಸಗಿದ್ದಾನೆ.

ಘಟನೆ ನಡೆದ ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಮೈಮೇಲೆ ಕುದಿಯುವ ನೀರು ಬಿದ್ದಿದ್ದರಿಂದ ಸ್ಥಿತಿ ಚಿಂತಾಜನಕವಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿವೆ. ಕಿರಿಯ ಮಗಳು ಒಂದು ವರ್ಷದ ಹಿಂದೆ ಜನಿಸಿದ್ದಾಳೆ. ಆರೋಪಿಯ ಹೆಸರು ಸತ್ಯಪಾಲ್. ಪೊಲೀಸರು ಆತನ ವಿರುದ್ಧ ಐಪಿಸಿ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಹಜಹಾನ್ ಪುರ ಗ್ರಾಮಾಂತರ ಎಸ್ಪಿ ಸಂಜೀವ್ ಬಾಜಪೈ ಪ್ರಕಾರ, 2013 ರಲ್ಲಿ ಸಂತ್ರಸ್ತೆ ವಿವಾಹವಾಗಿತ್ತು. ಆರೋಪಿ ಸತ್ಯಪಾಲ್, ವರದಕ್ಷಿಣೆಗೆ ಕಿರುಕುಳ ನೀಡ್ತಿದ್ದ ಎನ್ನಲಾಗಿದೆ. 50 ಸಾವಿರ ರೂಪಾಯಿ ತರುವಂತೆ ಸತ್ಯಪಾಲ್ ಹೇಳಿದ್ದ ಎನ್ನಲಾಗಿದೆ.

ಆರೋಪಿ ತಲೆಮರೆಸಿ ಕೊಂಡಿದ್ದಾನೆ. ಆತನ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...