alex Certify ಆಂಧ್ರ ಸಿಎಂಗೆ ದೇವಾಲಯ ನಿರ್ಮಿಸಿದ ಶಾಸಕ…! ಖರ್ಚಾಗಿದ್ದು ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರ ಸಿಎಂಗೆ ದೇವಾಲಯ ನಿರ್ಮಿಸಿದ ಶಾಸಕ…! ಖರ್ಚಾಗಿದ್ದು ಎಷ್ಟು ಗೊತ್ತಾ..?

ಚಿತ್ತೂರ್: ಶಾಸಕರೊಬ್ಬರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿನ್ನದ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ಹಾಗೂ ಬೃಹತ್ ಮ್ಯೂಸಿಯಂ ನಿರ್ಮಿಸಿದ್ದು, ಸದ್ಯ ಈ ಫೋಟೋಗಳು ಭಾರಿ ವೈರಲ್ ಆಗಿದೆ.

ಶ್ರೀಕಾಲಹಸ್ತಿ ಕ್ಷೇತ್ರದ ಶಾಸಕರಾದ ಬಿಯಾಪು ಮಧುಸೂಧನ್ ರೆಡ್ಡಿ ಅವರು ‘ನವರತ್ನಗಳ ಆಲಯಂ’ಎಂಬ ಹೆಸರಿನ ದೇವಾಲಯವನ್ನು ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ನಿರ್ಮಿಸಿದ್ದಾರೆ. “ನಮ್ಮ ಜಗನ್ನಣ್ಣ ಹಲವಾರು ಕಲ್ಯಾಣ ಯೋಜನೆಗಳನ್ನು ತರುವ ಮುಖಾಂತರ ಬಡ ಜನರಿಗೆ ಸಂತೋಷವನ್ನು ತರುವ ಮುಖಾಂತರ ದೇವರಾಗಿದ್ದಾರೆ” ಎಂದು ದೇವಾಲಯದ ಫೋಟೋವನ್ನು ಹಂಚಿಕೊಳ್ಳುತ್ತಾ ಟ್ವೀಟ್ ಮಾಡಿದ್ದಾರೆ.

BIG NEWS: ‘ಬ್ಯಾಂಕ್’ ಗ್ರಾಹಕರಿಗೆ ಮುಖ್ಯ ಮಾಹಿತಿ, ‘ಲಾಕರ್’ಗೆ RBI ಹೊಸ ನಿಯಮ

ನವರತ್ನಗಳು ಎಂದು ಕರೆಯಲ್ಪಡುವ ಮುಖ್ಯಮಂತ್ರಿಯವರ ಒಂಬತ್ತು ಕಲ್ಯಾಣ ಯೋಜನೆಗಳತ್ತ ಗಮನ ಸೆಳೆಯುವುದಕ್ಕಾಗಿ ಶಾಸಕರು ಈ ರೀತಿಯ ಯೋಜನೆ ಮಾಡಲು ನಿರ್ಧರಿಸಿದರು ಎಂದು ಹೇಳಲಾಗಿದೆ. ಆಂಧ್ರ ಸಿಎಂ ನವರತ್ನಗಳು ಯೋಜನೆಯ ಮುಖಾಂತರ 5.56 ಕೋಟಿ ಜನರಿಗೆ ತಲುಪಿದ್ದಾರೆ ಎಂದು ಶಾಸಕರು ವಿವರಿಸಿದ್ದಾರೆ. ಇನ್ನು ಈ ದೇಗುಲವನ್ನು ಡಿಸಿಎಂ ಕೆ. ನಾರಾಯಣಸ್ವಾಮಿ, ಸಚಿವ ಪೆಡ್ಡಿರೆಡ್ಡಿ ಮತ್ತು ಸಂಸದ ಪಿ.ವಿ. ಮಿಧುನ್ ರೆಡ್ಡಿ ಉದ್ಘಾಟಿಸಿದರು.

ಇನ್ನು ದೇವಾಲಯದ ಅಂದಾಜು ವೆಚ್ಚವು 10 ಲಕ್ಷ ರೂ.ಗಳಷ್ಟಿತ್ತು. ಆದರೆ ದೇವಾಲಯ ಪೂರ್ತಿಯಾಗಬೇಕಾದರೆ 2 ಕೋಟಿ ರೂ. ಖರ್ಚಾಗಿದ್ದು, ಇದು ಅನೇಕರ ಹುಬ್ಬು ಮೇಲೇರಿಸುವಂತಾಗಿದೆ. ಅಲ್ಲದೆ ಶಾಸಕ ಬಿಯಾಪು ತನ್ನನ್ನು ತಾನೇ ಸಮರ್ಥಿಸಿಕೊಂಡಿದ್ದು, “ಜಗಣ್ಣನವರಿಗೆ ನವರತ್ನಾಲಯ ದೇಗುಲ ಕಟ್ಟುವುದರಲ್ಲಿ ತಪ್ಪೇನಿದೆ ? ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಯಾರಾದರೂ ಸರಿ ಅವರು ದೇವರಿಗೆ ಸಮಾನರು” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/BiyyapuMadhu/status/1426932048380366854?ref_src=twsrc%5Etfw%7Ctwcamp%5Etweetembed%7Ctwterm%5E1426932048380366854%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fmuseum-cum-temple-dedicated-to-andhra-pradesh-chief-minister-7458441%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...