ನವದೆಹಲಿ: ಅಡುಗೆ ಅನಿಲ ದರವನ್ನು ಮತ್ತೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂಧನ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಅನಿಲ ದರವನ್ನು 25 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆಜಿ ಸಿಲಿಂಡರ್ ದರ ಕೋಲ್ಕತಾದಲ್ಲಿ 886 ರೂಪಾಯಿ ತಲುಪಿದೆ. ಲಖ್ನೋದಲ್ಲಿ 897.50 ರೂ,ಗೆ ತಲುಪಿದೆ.
ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ದರವನ್ನು 25.50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ. 2020 ರ ಏಪ್ರಿಲ್ ನಿಂದ ಎಲ್.ಪಿ.ಜಿ. ಸಬ್ಸಿಡಿ ಕೂಡ ನಿಲ್ಲಿಸಲಾಗಿದೆ. ಸಿಲಿಂಡರ್ ದರ 1 ಸಾವಿರ ರೂ. ಸನಿಹಕ್ಕೆ ಬಂದಿರುವುದು ಜನಸಾಮಾನ್ಯರಿಗಂತೂ ನುಂಗಲಾರದ ತುತ್ತಾಗಿದೆ.