ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಗೆ ಲಗ್ಗೆ ಇಡುವಾಗಲೇ ಭಾರಿ ದುಡ್ಡು ಸಹಿತ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ‘ಮಾನವೀಯ ನೆಲೆಯಲ್ಲಿ ಆಹ್ವಾನಿಸಿದ್ದೇವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.
ತಾಲಿಬಾನ್ ಕಾಬೂಲ್ ಸಮೀಪಿಸುತ್ತಿದ್ದಂತೆ ಘನಿ ಅಫ್ಘಾನಿಸ್ತಾನದಿಂದ ಅವರು ಪಲಾಯನ ಮಾಡಿದ್ದರು. ಯುಎಇಯ ಸರ್ಕಾರಿ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿ ಸಂಸ್ಥೆ ಬುಧವಾರದ ಹೇಳಿಕೆಯಲ್ಲಿ ಘನಿ ದೇಶದಲ್ಲಿ ಎಲ್ಲಿದ್ದಾರೆ ಎಂದು ಹೇಳದೇ ವಿದೇಶಾಂಗ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಘನಿ ಆಶ್ರಯ ಪಡೆದುಕೊಂಡಿರುವುದಾಗಿ ತಿಳಿಸಿದೆ.