alex Certify ಖಾತೆಯಲ್ಲಿ ಹಣವಿಲ್ಲವೆಂದ್ರೂ ಸಿಗಲಿದೆ ಸಂಬಳದ 3 ಪಟ್ಟು ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾತೆಯಲ್ಲಿ ಹಣವಿಲ್ಲವೆಂದ್ರೂ ಸಿಗಲಿದೆ ಸಂಬಳದ 3 ಪಟ್ಟು ಹಣ

ತುರ್ತು ಸಂದರ್ಭದಲ್ಲಿ ಹಣದ ಅಗತ್ಯವಿದ್ದಾಗ ಜನರು, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ ತಿಂಗಳ ಸಂಬಳ ಪಡೆಯುವ ಉದ್ಯೋಗಿಗಳು, ಸಂಬಂಧಿಕರು, ಸ್ನೇಹಿತರ ಬಳಿ ಹೋಗಬೇಕಾಗಿಲ್ಲ. ಸ್ಯಾಲರಿ ಓವರ್ ಡ್ರಾಫ್ಟ್ ಲಾಭ ಪಡೆಯಬಹುದು.

ಪ್ರತಿ ತಿಂಗಳು ನಿಮ್ಮ ಖಾತೆಗೆ ಸಂಬಳ ಬರ್ತಿದ್ದರೆ, ನೀವು ಸ್ಯಾಲರಿ ಓವರ್ ಡ್ರಾಫ್ಟ್ ಪಡೆಯಲು ಯೋಗ್ಯರೇ ಎಂದು ಚೆಕ್ ಮಾಡಬೇಕು. ಬ್ಯಾಂಕ್ ನಿಯಮಕ್ಕೆ ಅರ್ಹರಾಗಿದ್ದರೆ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸ್ಯಾಲರಿ ಓವರ್ ಡ್ರಾಫ್ಟ್ ಲಾಭ ಪಡೆಯಬಹುದು. ಸಂಬಳ ಖಾತೆಯಿಂದ ಪಡೆಯುವ ಕ್ರೆಡಿಟನ್ನು ಸ್ಯಾಲರಿ ಓವರ್ ಡ್ರಾಫ್ಟ್ ಎಂದು ಕರೆಯುತ್ತಾರೆ. ಸಂಬಳ ಹೊರತುಪಡಿಸಿ ಹೆಚ್ಚಿನ ಹಣ ಬೇಕಾದಲ್ಲಿ, ಸಂಬಳ ಖಾತೆಯಿಂದ ಹೆಚ್ಚುವರಿ ಹಣವನ್ನು ಪಡೆಯಬಹುದು.

ಎಲ್ಲಾ ಗ್ರಾಹಕರಿಗೂ ಬ್ಯಾಂಕ್ ಈ ಸೌಲಭ್ಯವನ್ನು ನೀಡುವುದಿಲ್ಲ. ಬ್ಯಾಂಕ್ ತನ್ನ ಕೆಲವು ಗ್ರಾಹಕರು ಮತ್ತು  ಕಂಪನಿಯ ಕ್ರೆಡಿಟ್ ಪ್ರೊಫೈಲ್ ನೋಡಿದ ನಂತರವೇ ಓವರ್‌ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್, ಎಸ್‌ಬಿಐ ನಂತಹ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ.

ಪ್ರತಿ ಬ್ಯಾಂಕ್ ಸಂಬಳ ಓವರ್ ಡ್ರಾಫ್ಟ್ ಬಗ್ಗೆ ವಿಭಿನ್ನ ನಿಯಮಗಳು ಮತ್ತು ಬಡ್ಡಿದರಗಳನ್ನು ಹೊಂದಿದೆ. ಅನೇಕ ಬ್ಯಾಂಕುಗಳು ಈಗಾಗಲೇ ತಮ್ಮ ಉತ್ತಮ ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ. ಕೆಲವು ಬ್ಯಾಂಕುಗಳು ಮಾಸಿಕ ವೇತನಕ್ಕಿಂತ 2-3 ಪಟ್ಟು ಓವರ್‌ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತವೆ. ಕೆಲವು ಬ್ಯಾಂಕುಗಳು ಈ ಸೌಲಭ್ಯವನ್ನು ಒಂದು ತಿಂಗಳ ಸಂಬಳದ ಶೇಕಡಾ 80-90 ರಷ್ಟನ್ನು ಮಾತ್ರ ನೀಡುತ್ತವೆ.

ಓವರ್‌ ಡ್ರಾಫ್ಟ್ ಒಂದು ರೀತಿಯ ತ್ವರಿತ ಸಾಲ. ಇದಕ್ಕಾಗಿ ಬಡ್ಡಿ ಪಾವತಿಸಬೇಕು. ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕು.

ಕ್ರೆಡಿಟ್ ಕಾರ್ಡ್ ನಂತೆ ಬಡ್ಡಿದರಗಳು ಅಧಿಕವಾಗಿರುತ್ತದೆ. ಸಂಬಳ ಓವರ್ ಡ್ರಾಫ್ಟ್ ನಲ್ಲಿ, ಪ್ರತಿ ತಿಂಗಳು ಶೇಕಡಾ ಒಂದರಿಂದ ಮೂರರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಬಡ್ಡಿ ಪಾವತಿಸದಿದ್ದರೆ ದಂಡ ವಿಧಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...