ಲಖನೌ: ತಾಲಿಬಾನ್ಗೆ ಬೆಂಬಲ ನೀಡುತ್ತಾ, ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ ಆರೋಪದ ಮೇರೆಗೆ ಉತ್ತರಪ್ರದೇಶದ ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಶಾಪಿಕ್ಯುರ್ ರೆಹಮಾನ್ ಬರ್ಕ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆ. 16ರಂದು ಹೇಳಿಕೆ ನೀಡಿದ್ದ ರೆಹಮಾನ್ ಅವರು ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದರು.
1994ರಲ್ಲಿ ಟಂಕಿಸಲಾದ ಈ ನಾಣ್ಯ ಇದ್ದರೆ ಐದು ಲಕ್ಷ ರೂಪಾಯಿ ನಿಮ್ಮದಾಗಬಹುದು…!
ಇದನ್ನು ಖಂಡಿಸಿ ಬಿಜೆಪಿ ನಾಯಕ ರಾಜೇಶ್ ಸಿಂಘಾಲ್ ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಉತ್ತರಪ್ರದೇಶ ಡಿಸಿಎಂ ಕೆ.ಪಿ. ಮೌರ್ಯ ಕೂಡ ರೆಹಮಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸಮಾಜವಾದಿ ಪಕ್ಷದ ನಾಯಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದರು.
ತನ್ನ ನೆಲದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್ ಹೋರಾಟ ನಡೆಸುತ್ತಿದೆ. ಭಾರತವು ಬ್ರಿಟಿಷರಿಂದ ಮುಕ್ತವಾಗಲು ಹೋರಾಟ ನಡೆಸಿದಂತೆ, ತಾಲಿಬಾನ್ ಕೂಡ ಮಾಡುತ್ತಿದೆ. ರಷ್ಯಾ, ಅಮೆರಿಕಕ್ಕೆ ತನ್ನ ನೆಲದಲ್ಲಿ ಅಧಿಪತ್ಯ ಸಾಧಿಸಲು ತಾಲಿಬಾನ್ ಬಿಡುತ್ತಿಲ್ಲ ಎಂದು ರೆಹಮಾನ್ ಅವರು ಸಮರ್ಥಿಸಿಕೊಂಡಿದ್ದರು.