ಕೋವಿಡ್-19 ಲಸಿಕೆಗಳು ವ್ಯರ್ಥವಾಗುವುದನ್ನು ನಿಯಂತ್ರಿಸಿರುವ ಪಶ್ವಿಮ ಬಂಗಾಳ ಸರ್ಕಾರಕ್ಕೆ ಈಗ ಸಿರಿಂಜ್ಗಳ ಕೊರತೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಆದಷ್ಟು ಬೇಗ ಎರಡು ದಶಲಕ್ಷದಷ್ಟು ಸಿರಿಂಜ್ಗಳ ಖರೀದಿ ಮಾಡುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
“ಸಿರಿಂಜ್ಗಳ ಕೊರತೆ ತಲೆದೋರಿದೆ. ಲಸಿಕೆಗಳನ್ನು ಉಳಿತಾಯ ಮಾಡಿಕೊಂಡು ಕೇಂದ್ರ ಸರ್ಕಾರ ಕಳುಹಿಸಿದ ಸಿರಿಂಜ್ಗಳನ್ನು ಬಳಸಿದ್ದೇವೆ. ಈಗ ನಾವು ಒಂದಷ್ಟು ಲಕ್ಷ ಸಿರಿಂಜ್ಗಳನ್ನು ಕ್ರೋಢೀಕರಿಸಿಕೊಳ್ಳಬೇಕು,’ ಎಂದು ಪಶ್ಚಿಮ ಬಂಗಾಳ ಆರೋಗ್ಯ ಸೇವೆಗಳ ನಿರ್ದೇಶಕ ಅಜೊಯ್ ಚೌಧರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ 30 ದಶಲಕ್ಷದಷ್ಟು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಡೋಸ್ಗಳು ಬಂದಿಳಿದಿವೆ. ಕೋವಿಶೀಲ್ಡ್ನ ಪ್ರತಿಯೊಂದು ಗುಚ್ಛದಲ್ಲೂ 10 ಡೋಸ್ಗಳಿದ್ದು, ಇದಕ್ಕೆ ಅನುಗುಣವಾಗಿ ಸಿರಿಂಜ್ಗಳನ್ನು ಕೇಂದ್ರ ಒದಗಿಸಿದೆ.
“ಪ್ರತಿ ಗುಚ್ಛದಲ್ಲಿ 10% ವೇಸ್ಟೇಜ್ ಆಗುವುದು ಸಾಮಾನ್ಯ. ಸ್ವಲ್ಪ ಕ್ಷಮತೆಯಿಂದ ಇದ್ದರೆ ಪ್ರತಿಯೊಂದು ಗುಚ್ಛದಿಂದ 11 ಡೋಸ್ಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಮೂಲಕ ವೇಸ್ಟೇಜ್ ಪ್ರಮಾಣವನ್ನು ಮೈನಸ್ 7%ಗೆ ಇಳಿಸಬಹುದಾಗಿದೆ. ಹೀಗೆ ಮಾಡಿಕೊಂಡು ಗುಚ್ಛಗಳೊಂದಿಗೆ ಬಂದ ಸಿರಿಂಜ್ಗಳನ್ನು ಖಾಲಿ ಮಾಡಿದ್ದೇವೆ,” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.