ಟೋಕಿಯೋ ಒಲಿಂಪಿಕ್ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಕ್ಷಣಗಳನ್ನು ಟ್ವಿಟರ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಆರ್ಚರ್ ದೀಪಾ ಕುಮಾರಿ, ಬೆಳ್ಳಿ ಪದಕ ವಿಜೇತ ರವಿ ದಹಿಯಾರೊಂದಿಗೆ ಪ್ರಧಾನಿ ಸಂವಹನ ನಡೆಸುತ್ತಿರುವುದನ್ನು ನೋಡಬಹುದಾಗಿದೆ.
“ಐಸ್-ಕ್ರೀಂಗಳಿಂದ ಚೂರ್ಮಾ ಸವಿಯುವವರೆಗೂ, ಆರೋಗ್ಯ ಹಾಗೂ ಫಿಟ್ನೆಸ್ ಕುರಿತು ಚರ್ಚಿಸುವ ತನಕ, ಸ್ಪೂರ್ತಿಯುತ ಮಾತುಗಳಿಂದ ತಮಾಷೆಯ ಕ್ಷಣಗಳವರೆಗೂ……ಟೋಕಿಯೋ 2020 ಭಾರತದ ತಂಡದೊಂದಿಗೆ ನನ್ನ ಸಂವಹನದ ವೇಳೆ ಏನಾಯಿತು ಎಂದು ವೀಕ್ಷಿಸಿ” ಎಂದು ವಿಡಿಯೋಗೆ ಕ್ಯಾಪ್ಷನ್ ಹಾಕಲಾಗಿದೆ.
BIG NEWS: HDFC ಬ್ಯಾಂಕ್ ಗೆ ದೊಡ್ಡ ರಿಲೀಫ್ ನೀಡಿದ RBI
“ನೀವು ಜಯವನ್ನು ತಲೆಗೆ ಹತ್ತಿಸಿಕೊಳ್ಳುವುದಿಲ್ಲ ಹಾಗೂ ಸೋಲನ್ನು ಮನಸ್ಸಿಗೆ ಹಾಕಿಕೊಳ್ಳುವುದಿಲ್ಲ” ಎಂದು ನೀರಜ್ ಚೋಪ್ರಾರನ್ನು ಮೆಚ್ಚಿ ಮಾತನಾಡಿದ ಮೋದಿ, ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡ ದೀಪಾ ಕುಮಾರಿಗೆ ಭರವಸೆ ಕಳೆದುಕೊಳ್ಳದಂತೆ ಕಿವಿ ಮಾತುಗಳನ್ನಾಡಿದ್ದಾರೆ.
ಫೆನ್ಸಿಂಗ್ನಲ್ಲಿ ಮೊದಲ ಬಾರಿಗೆ ಭಾರತವನ್ನು ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸುವಂತೆ ಮಾಡಿದ ಭವಾನಿ ದೇವಿರನ್ನು ಸಹ ಮೋದಿ ಇದೇ ವೇಳೆ ಶ್ಲಾಘಿಸಿದ್ದಾರೆ.