ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ ವಂಚಿತರಾಗಿರುವ ಆಟಗಾರನ ವೃತ್ತಿ ಜೀವನ ಅಂತ್ಯದಲ್ಲಿದೆ. ಟೀಂ ಇಂಡಿಯಾದ ಈ ಆಟಗಾರನ ಹೆಸರು ಉಮೇಶ್ ಯಾದವ್.
ಟೀಂ ಇಂಡಿಯಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಶಾರ್ದೂಲ್ ಠಾಕೂರ್ ಅವರಂತಹ ಬೌಲಿಂಗ್ ಆಟಗಾರರನ್ನು ಸಿದ್ಧಪಡಿಸಿದೆ. ಈ ಕಾರಣದಿಂದಾಗಿ ಉಮೇಶ್ ಯಾದವ್ ಗೆ ಅವಕಾಶ ಸಿಗ್ತಿಲ್ಲ. ಉಮೇಶ್ ಯಾದವ್ ಈಗಾಗಲೇ ಏಕದಿನ ಮತ್ತು ಟಿ 20 ತಂಡದಿಂದ ಹೊರಗುಳಿದಿದ್ದಾರೆ. ಈಗ ಉಮೇಶ್ ಯಾದವ್, ಟೆಸ್ಟ್ ತಂಡದಿಂದಲೂ ಹೊರಗಿದ್ದಾರೆ.
ಉಮೇಶ್ ಯಾದವ್ ಕ್ರಮೇಣ ಏಕದಿನ ಮತ್ತು ಟಿ 20 ತಂಡದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಟೆಸ್ಟ್ ತಂಡದಲ್ಲೂ ಆಡಲು ಅವಕಾಶ ಸಿಗ್ತಿಲ್ಲ. 34 ಟೆಸ್ಟ್ ಪಂದ್ಯಗಳನ್ನು ಆಡಿರುವ 33 ವರ್ಷದ ಉಮೇಶ್ ಯಾದವ್ ಗೆ ಇಂಗ್ಲೆಂಡ್ ಪ್ರವಾಸ ಕೊನೆಯದು ಎನ್ನಲಾಗ್ತಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾದವ್ ಕೊನೆ ಪಂದ್ಯವನ್ನಾಡಿದ್ದರು. ಅಡಿಲೇಡ್ ಟೆಸ್ಟ್ ನಲ್ಲಿ 3 ಮತ್ತು ಮೆಲ್ಬೋರ್ನ್ ಟೆಸ್ಟ್ ನಲ್ಲಿ ಒಂದು ವಿಕೆಟ್ ಪಡೆದಿದ್ದರು. ಗಾಯದಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಹೊರಗುಳಿಯಬೇಕಾಯಿತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ಅವಕಾಶ ಸಿಗಲಿಲ್ಲ.
ಇಂಗ್ಲೆಂಡ್ ಟೆಸ್ಟ್ ನಲ್ಲೂ ಇದೇ ಆಗ್ತಿದೆ. ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ ತಂಡಕ್ಕೆ ಉಮೇಶ್ ಯಾದವ್ ಆಯ್ಕೆಯಾಗಿದ್ದಾರೆ. ಆದ್ರೆ ಎರಡೂ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ.