ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಬಿ.ವಿ. ನಾಗರತ್ನ 2027ರಲ್ಲಿ ನೇಮಕವಾಗುವ ಸಾಧ್ಯತೆ ಇದೆ.
ಪರಮೋಚ್ಛ ನ್ಯಾಯಾಲಯಕ್ಕೆ ನೇಮಕ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎನ್.ವಿ. ರಮಣ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ನ ಕೊಲಾಜಿಯಂ ಸಮಿತಿ ಒಂಬತ್ತು ಮಂದಿಯ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಾಗರತ್ನರ ಜೊತೆಗೆ ನ್ಯಾಯಾಧೀಶೆಯರಾದ ಹಿಮಾ ಕೊಹ್ಲಿ ಹಾಗೂ ಬೇಲಾ ತ್ರಿವೇದಿ ಸಹ ಇದ್ದಾರೆ.
ಬಾರ್ ಮಾಲೀಕನ ಮೇಲೆ ದೋಷ ಹೊರೆಸಿ ಬರೋಬ್ಬರಿ 40 ಕೋಟಿ ರೂ. ಪರಿಹಾರ ಪಡೆದ ಕುಡುಕ
ಸದ್ಯ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶೆಯಾಗಿರುವ ನಾಗರತ್ನ ಸಹ ಈ ಒಂಬತ್ತು ಮಂದಿಯಲ್ಲಿ ಒಬ್ಬರಾಗಿದ್ದಾರೆ. 2008ರಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕವಾಗಿದ್ದ ನಾಗರತ್ನ, ಎರಡು ವರ್ಷಗಳ ಬಳಿಕ ಶಾಶ್ವತ ನ್ಯಾಯಾಧೀಶೆಯಾಗಿ ಉನ್ನತಿ ಪಡೆದಿದ್ದರು.
ಜೂನ್ 1989 ರಿಂದ ಡಿಸೆಂಬರ್ 1989ರ ನಡುವೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ಇ.ಎಸ್. ವೆಂಕಟರಾಮಯ್ಯರ ಪುತ್ರಿಯಾಗಿರುವ ನಾಗರತ್ನ ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ.