ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳೇ ಖಾಯಂ ಆಗಿವೆ. ಮನೆಯಲ್ಲೇ ಕೂತು ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್ಗಳ ಸಹಾಯದಿಂದ ಆನ್ಲೈನ್ನಲ್ಲಿ ತರಗತಿಗಳಿಗೆ ಭಾಗಿಯಾಗುತ್ತಿದ್ದಾರೆ. ಇದೇ ರೀತಿ ಆನ್ಲೈನ್ ತರಗತಿಯಲ್ಲಿದ್ದ ವಿದ್ಯಾರ್ಥಿಗೆ ಪೋಷಕರು ಡಿಸ್ಬರ್ಬ್ ಮಾಡಿದ್ದಾರೆ ಎಂದು ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಶಾಕಿಂಗ್ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಡೆದಿದೆ.
17 ವರ್ಷದ ಗುರುಚರಣ್ ಉಡುಪ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು 2 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಗುರುಚರಣ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅಮ್ಮ ನನಗೆ ಡಿಸ್ಟರ್ಬ್ ಮಾಡಬೇಡ ಎಂದು ರೂಮಿನೊಳಗೆ ತೆರಳಿದ್ದ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡಿದ್ದಾನೆ.
ಈ ಸಂಬಂಧ ಪೋಷಕರು ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.