alex Certify ಟ್ವಿಟ್ಟರ್ ಬರ್ಡ್ ಫ್ರೈ ಮಾಡುವ ಮೂಲಕ ‘ಕೈ’ ಕಾರ್ಯಕರ್ತರಿಂದ ವಿಭಿನ್ನ ಪ್ರೊಟೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್ ಬರ್ಡ್ ಫ್ರೈ ಮಾಡುವ ಮೂಲಕ ‘ಕೈ’ ಕಾರ್ಯಕರ್ತರಿಂದ ವಿಭಿನ್ನ ಪ್ರೊಟೆಸ್ಟ್

ಹೈದರಾಬಾದ್: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿದ ಸ್ವಪಕ್ಷೀಯ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಟ್ವಿಟ್ಟರ್ ಪಕ್ಷಿಯನ್ನು ತವಾದಲ್ಲಿ ಹುರಿಯುವ ಮುಖಾಂತರ ರಾಹುಲ್ ಗಾಂಧಿ ವಿರುದ್ಧದ ದಂಡನಾತ್ಮಕ ಕ್ರಮಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ಪಕ್ಷದ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ವಿಷಯವನ್ನು ಕಾಂಗ್ರೆಸ್ ನಾಯಕ ಪ್ರಸ್ತಾಪಿಸಿದಾಗ ತನ್ನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಟ್ವಿಟ್ಟರ್ ತಾಣ ರಾಹುಲ್ ಗಾಂಧಿಯ ಖಾತೆಯನ್ನು ಲಾಕ್ ಮಾಡಿತ್ತು. ನಂತರ ಖಾತೆಯನ್ನು ಟ್ವಿಟ್ಟರ್‌ನಿಂದ ಅನ್‌ಲಾಕ್ ಮಾಡಲಾಗಿತ್ತು.

ಶಿವಣ್ಣ, ಕಿಚ್ಚ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ: ಬೆಳ್ಳಿತೆರೆಯಲ್ಲಿ ಮತ್ತೆ ಒಂದಾಗುತ್ತಿದ್ದಾರೆ ‘ವಿಲನ್’ ಜೋಡಿ

ಟ್ಟಿಟ್ಟರ್ ನ ಈ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ‘ಟ್ವಿಟ್ಟರ್ ಬರ್ಡ್’ನ್ನು ತವಾದಲ್ಲಿ ಹುರಿಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮುಖಾಂತರ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

“ಟ್ವಿಟರ್, ನೀವು ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡುವ ಮೂಲಕ ಟ್ವೀಟ್ ಗಳಿಗೆ ಪ್ರಚಾರ ನೀಡದೆ ತಪ್ಪು ಮಾಡಿದ್ದೀರಿ. ಹಾಗಾಗಿ, ನಾವು ಇದನ್ನು (ಟ್ವಿಟರ್ ಬರ್ಡ್) ಹುರಿಯುತ್ತಿದ್ದೇವೆ ಮತ್ತು ಇದನ್ನು ಗುರುಗ್ರಾಮ ಮತ್ತು ದೆಹಲಿಯ ಪ್ರಧಾನ ಕಚೇರಿಗೆ ಕಳುಹಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು. ಜೊತೆಗೆ ನಿಮ್ಮ ಖಾದ್ಯವನ್ನು ನೀವು ಆನಂದಿಸುವಿರಿ ಎಂದು ಭಾವಿಸುವುದಾಗಿ ಹೇಳಿದರು.

ಈ ತಿಂಗಳ ಆರಂಭದಲ್ಲಿ, ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ನಲ್ಲಿ ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಅತ್ಯಾಚಾರ, ಕೊಲೆ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ ಒಂಭತ್ತು ವರ್ಷದ ಬಾಲಕಿಯ ಪೋಷಕರೊಂದಿಗೆ ತನ್ನ ಚಿತ್ರವನ್ನು ಅಪ್ಲೋಡ್ ಮಾಡಿದ್ದರು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನೀಡಿದ ಸೂಚನೆ ಮೇರೆಗೆ ರಾಹುಲ್ ಗಾಂಧಿಯವರ ಟ್ವಿಟ್ಟರ್ ಅನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು. ಸಂತ್ರಸ್ತೆಯ ಕುಟುಂಬದ ಚಿತ್ರಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕನ ಟ್ವಿಟ್ಟರ್ ಖಾತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್‌ಸಿಪಿಸಿಆರ್ ಟ್ವಿಟ್ಟರ್‌ಗೆ ಕೇಳಿಕೊಂಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...