ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಅನೇಕ ಹೃದಯ ಕಲಕುವ ಫೋಟೋಗಳು ಹೊರಬರುತ್ತಿವೆ. ತಾಲಿಬಾನ್ ಭಯದಿಂದ ಸಾವಿರಾರು ಜನರು ಕಾಬೂಲ್ ನಿಂದ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿಯಿದೆ. ವಿಮಾನ ಏರಲು ನೂಕು-ನುಗ್ಗಲಾದ ಹಾಗೆ ವಿಮಾನದ ರೆಕ್ಕೆ ಹಿಡಿದು ಕೆಳಗೆ ಬಿದ್ದ ಅನೇಕ ದೃಶ್ಯಗಳು ಸೆರೆಯಾಗಿವೆ. ಈಗ ಮತ್ತೊಂದು ಹೃದಯ ಕಲಕುವ ಫೋಟೋ ಹೊರಬಿದ್ದಿದೆ.
ತಾಲಿಬಾನ್ ಭಯ, 7 ತಿಂಗಳ ಬಾಲಕಿಯನ್ನು ಆಕೆಯ ಪೋಷಕರಿಂದ ಬೇರ್ಪಡಿಸಿದೆ. ಮುಗ್ದ ಮಗು, ಪಾಲಕರಿಂದ ದೂರವಾಗಿದ್ದಾಳೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ. ಹೆಣ್ಣು ಮಗುವಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಅಫ್ಘಾನಿಸ್ತಾನದ ಅಶ್ವಕ ನ್ಯೂಸ್ ಏಜೆನ್ಸಿಯ ಪ್ರಕಾರ, ಹುಡುಗಿಯ ಪೋಷಕರು ಕಾಬೂಲ್‌ನ ಪಿಡಿ -5 ರಲ್ಲಿ ವಾಸಿಸುತ್ತಿದ್ದರು. ಪಾಲಕರ ಹುಡುಕಾಟ ನಡೆಯುತ್ತಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಎದುರಿಸಲು ವಿಫಲವಾದ ಅಂತರಾಷ್ಟ್ರೀಯ ಏಜೆನ್ಸಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.