ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ಭಯೋತ್ಪಾದಕ ಸಂಘಟನೆ ವಶಪಡಿಸಿಕೊಂಡಿದ್ದು, ಅಲ್ಲಿನ ನಾಗರಿಕರು ಭಯಭೀತರಾಗಿದ್ದಾರೆ. ಅಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ದೇಶ ತೊರೆಯುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ‘ತಾಲಿಬಾನ್ ಗೆ ಮಲಯಾಳಿ ಲಿಂಕ್’ ಎಂದು ಹೇಳಿರುವ ಟ್ವೀಟ್, ಭಾರಿ ವಿವಾದ ಭುಗಿಲೆದ್ದಿದೆ.
ರಮೀಜ್ ಎಂಬ ಬಳಕೆದಾರ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾನೆ. “ತಾಲಿಬಾನ್ ಹೋರಾಟಗಾರನು ಸಂತೋಷದಿಂದ ಅಳುತ್ತಿದ್ದಾನೆ, ಅವರು ಕಾಬೂಲ್ನ ಹೊರಗೆ ತಲುಪಿದಾಗ ಗೆಲುವು ಮಹತ್ವದ್ದಾಗಿದೆ ಎಂದು ತಿಳಿದುಕೊಂಡರು” ಎಂದು ವಿಡಿಯೋದೊಂದಿಗೆ ಟ್ವಿಟರ್ನಲ್ಲಿ ಬರೆದಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಇಬ್ಬರು ಮಲಯಾಳಿ ತಾಲಿಬಾನ್ ಹೋರಾಟಗಾರರು ವಿಡಿಯೋದಲ್ಲಿ ಕಾಣಿಸಿಕೊಂಡಿರುವುದಾಗಿ ಬರೆದಿದ್ದಾರೆ.
“ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್ ಗಳಿರುವಂತೆ ತೋರುತ್ತದೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ “ರಮೀಜ್ ಸಂಘರ್ಷದಲ್ಲಿ ಆಸಕ್ತಿ ಹೊಂದಿದ್ದಾರೆ” ಎಂದು ತರೂರ್ ಉಲ್ಲೇಖಿಸಿದ್ದಾರೆ.
ಪದೇ ಪದೇ ನೌಕರಿ ಬದಲಿಸ್ತಿದ್ದರೆ ಪಿಎಫ್ ಖಾತೆಯ ಈ ವಿಷ್ಯ ತಿಳಿದಿರಲಿ
ಇನ್ನು ಸಂಘರ್ಷ ಪತ್ರಿಕೋದ್ಯಮದಲ್ಲಿ ತನಗೆ ಆಸಕ್ತಿಯಿದೆಯೆಂದು ಉಲ್ಲೇಖಿಸಿರುವ ರಮೀಜ್, ತಾಲಿಬಾನ್ಗಳು ಯಾವುದೇ ಕೇರಳ ಮೂಲದ ಹೋರಾಟಗಾರರನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ “ಮಲೆಯಾಳಿಗಳು ತಾಲಿಬಾನ್ನ ಭಾಗವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದೂ ತರೂರ್ ಪ್ರತಿಕ್ರಿಯಿಸಿದರು.
ತರೂರ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೇರಳವನ್ನು ಭಯೋತ್ಪಾದನೆಯೊಂದಿಗೆ ಸಂಯೋಜಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. “ಕಾಂಗ್ರೆಸ್ ಮತ್ತು ಎಡಪಕ್ಷಗಳು ತಮ್ಮ ಹುಸಿ ಜಾತ್ಯತೀತತೆಯ ಮೂಲಕ ಕೇರಳ ರಾಜ್ಯವನ್ನು ಮತ್ತು ಅಲ್ಲಿನ ಜನರನ್ನು ಹಾಳುಗೆಡವಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಕೇಂದ್ರ ಸರ್ಕಾರದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ, “ತರೂರ್ ಇದನ್ನು ಒಂದು ಸಾಧನೆಯೆಂದು ಒಪ್ಪಿಕೊಳ್ಳುತ್ತಾರೆಯೇ” ಎಂದು ಆಶ್ಚರ್ಯಪಟ್ಟರು.