ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರ, ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಕೇಂದ್ರ ಸರ್ಕಾರ, ವಸತಿರಹಿತರಿಗೆ ಮನೆಗಳನ್ನು ನೀಡುತ್ತದೆ. ಸಾಲ ಮಾಡಿ ಮನೆ ಅಥವಾ ಫ್ಲಾಟ್ ಖರೀದಿಸುವ ಜನರಿಗೆ ಈ ಯೋಜನೆಯಡಿ ಸಬ್ಸಿಡಿ ಕೂಡ ಲಭ್ಯವಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು, ಮೊಬೈಲ್ನಿಂದ ಸರ್ಕಾರಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನಂತ್ರ ಲಾಗಿನ್ ಆಗಬೇಕು. ಒಂದು ಬಾರಿಯ ಪಾಸ್ವರ್ಡ್ ಬರುತ್ತದೆ. ಅದರ ಸಹಾಯದಿಂದ ಲಾಗಿನ್ ಆಗಬೇಕು. ನಂತ್ರ ಅಗತ್ಯ ಮಾಹಿತಿಯನ್ನು ನಮೂದಿಸಬೇಕು. ಪಿಎಂಎವೈಜಿ ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರವು ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಇದರ ನಂತರ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಪಿಎಂಎವೈಜಿ ವೆಬ್ಸೈಟ್ನಲ್ಲಿ ಹಾಕಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ, ಈ ಹಿಂದೆ ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ, ಈಗ ಗೃಹ ಸಾಲದ ಮೊತ್ತವನ್ನು ಹೆಚ್ಚಿಸುವ ಮೂಲಕ ಅದರ ಲಾಭವನ್ನು ಮಧ್ಯಮ ವರ್ಗದವರಿಗೂ ನೀಡಲಾಗುತ್ತಿದೆ. ಈ ಹಿಂದೆ ಗೃಹ ಸಾಲದ ಮೊತ್ತವು 3 ರಿಂದ 6 ಲಕ್ಷ ರೂಪಾಯಿವರೆಗಿತ್ತು. ಅದರ ಮೇಲೆ ಬಡ್ಡಿ ಸಹಾಯಧನ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿದೆ.