ಅಮೆರಿಕ ನೇತೃತ್ವದ ಪಡೆಗಳು ತಂತಮ್ಮ ದೇಶಗಳಿಗೆ ಹಿಂದಿರುಗುತ್ತಲೇ ಅಫ್ಘಾನಿಸ್ತಾವನ್ನು ಇಡಿಯಾಗಿ ಆವರಿಸಿ ರಾಜಧಾನಿ ಕಾಬೂಲ್ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್, ಹೊಸ ಇಸ್ಲಾಮಿಕ್ ಆಡಳಿತವನ್ನು ಘೋಷಿಸಲು ಸಜ್ಜಾಗಿದೆ.
ಇದೇ ವೇಳೆ ತಾಲಿಬಾನಿಗಳ ಕೈಯಲ್ಲಿ ಭವಿಷ್ಯದ ದಿನಗಳನ್ನು ನೆನೆದು ಅಫ್ಘಾನಿಸ್ತಾನದಿಂದ ಪಲಾಯನಗೈಯ್ಯುತ್ತಿರುವ ಮಂದಿಯ ಪೈಕಿ ಸರ್ಕಾರೀ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರೂ ಇದ್ದಾರೆ.
ದೇಶ ಕಾಯುವ ಯೋಧರಿಗಾಗಿ ರಾಖಿ ತಯಾರಿಸಿದ ಮಹಿಳೆಯರು
ಸರ್ಕಾರ ರಚನೆಯಾದ ಕೂಡಲೇ ಅಧಿಕೃತವಾಗಿ ಆಡಳಿತದ ವಿವಿಧ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಸರ್ಕಾರೀ ಅಧಿಕಾರಿಗಳ ಮಹತ್ವವನ್ನು ಮನಗಂಡಿರುವ ತಾಲಿಬಾನ್ ಅಧಿಕಾರ ಶಾಹಿ ವರ್ಗಕ್ಕೆ ಸುತ್ತೋಲೆ ಹೊರಡಿಸಿದೆ.
“ಎಲ್ಲಾ ಸರ್ಕಾರೀ ಅಧಿಕಾರಿಗಳು ಕೆಲಸಕ್ಕೆ ಹಾಜರಾಗಬೇಕು ಎಂದು ಸಾಮಾನ್ಯ ಸುತ್ತೋಲೆ ಹೊರಡಿಸುತ್ತಿದ್ದೇವೆ. ಹೀಗಾಗಿ ನಿಮ್ಮ ದೈನಂದಿನ ಕೆಲಸವನ್ನು ಪೂರ್ಣ ವಿಶ್ವಾಸದೊಂದಿಗೆ ಮತ್ತೆ ಆರಂಭಿಸಬೇಕು,” ಎಂದು ತಾಲಿಬಾನ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ.