ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಲಾಭ ಪಡೆಯುತ್ತಿರುವ ರೈತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿ, 2000 ರೂಪಾಯಿಗಳ ಬದಲಾಗಿ, 4000 ರೂಪಾಯಿಗಳ ಕಂತುಗಳು ರೈತರ ಖಾತೆಗೆ ಬರುವ ಸಾಧ್ಯತೆಯಿದೆ. ಮಾಧ್ಯಮದ ವರದಿ ಪ್ರಕಾರ, ಮೋದಿ ಸರ್ಕಾರ ಶೀಘ್ರದಲ್ಲೇ ಫಲಾನುಭವಿ ರೈತರಿಗೆ ಉಡುಗೊರೆ ನೀಡಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಒಂದು ವೇಳೆ ಹಣ ದ್ವಿಗುಣಗೊಂಡಲ್ಲಿ ರೈತರು ಪ್ರತಿ ವರ್ಷ 6000 ರೂಪಾಯಿಗಳ ಬದಲಾಗಿ ಮೂರು ಕಂತುಗಳಲ್ಲಿ 12000 ರೂಪಾಯಿಗಳನ್ನು ಪಡೆಯಲಿದ್ದಾರೆ.
ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್, ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ, ಈ ಬಗ್ಗೆ ಮನವಿ ಸಲ್ಲಿಸಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತವನ್ನು ದ್ವಿಗುಣಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
ಸದ್ಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ, ವಾರ್ಷಿಕವಾಗಿ 6,000 ರೂಪಾಯಿಗಳನ್ನು ರೈತರ ಖಾತೆಗೆ ಕಳುಹಿಸಲಾಗುತ್ತಿದೆ. ಈ ಹಣವನ್ನು 3 ಕಂತುಗಳಲ್ಲಿ ಕಳುಹಿಸಲಾಗಿದೆ. ಪ್ರತಿ ಕಂತಿನಲ್ಲಿ 2,000 ರೂಪಾಯಿ ನೀಡಲಾಗುತ್ತಿದೆ.