ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಇದೇ ಖುಷಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಮಂಗಳವಾರ, ಐಸಿಸಿ, ಟಿ-20 ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೊರೊನಾ ವೈರಸ್ನಿಂದಾಗಿ, ಭಾರತದಲ್ಲಿ ನಡೆಯಲಿರುವ ಈ ಪಂದ್ಯಾವಳಿಯನ್ನು ಈಗ ಓಮನ್ ಮತ್ತು ಯುಎಇಯಲ್ಲಿ ಆಯೋಜಿಸಲಾಗುತ್ತಿದೆ. ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭವಾಗಲಿದೆ. ಫೈನಲ್ ಪಂದ್ಯ ನವೆಂಬರ್ 14 ರಂದು ನಡೆಯಲಿದೆ. ಭಾರತದ ಮೊದಲ ಪಂದ್ಯ ಅಕ್ಟೋಬರ್ 24 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಸೆಣೆಸಲಿದೆ.
ಟಿ 20 ವಿಶ್ವಕಪ್ನ ಗುಂಪನ್ನು ಈಗಾಗಲೇ ಪ್ರಕಟಿಸಲಾಗಿದೆ. ಮೊದಲ ಸುತ್ತಿನಲ್ಲಿ 8 ತಂಡಗಳು ಸೂಪರ್ 12 ಗೆ ಪ್ರವೇಶಿಸಲು ಸ್ಪರ್ಧಿಸಲಿವೆ. ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ಗುಂಪು ಎ ನಲ್ಲಿ ಸ್ಥಾನ ಪಡೆದಿದ್ದರೆ, ಒಮಾನ್, ಪಿಎನ್ಜಿ, ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶಗಳು ಬಿ ಗುಂಪಿನಲ್ಲಿವೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಮಾತ್ರ ಎರಡನೇ ಸುತ್ತಿಗೆ ಪ್ರವೇಶ ಪಡೆಯಲಿವೆ. ಸೂಪರ್ 12 ಪಂದ್ಯಗಳು ಅಕ್ಟೋಬರ್ 23 ರಿಂದ ಆರಂಭವಾಗಲಿವೆ. ಇದಕ್ಕೂ ಮೊದಲು, ಮೊದಲ ಸುತ್ತಿನ ಪಂದ್ಯಗಳು ಅಕ್ಟೋಬರ್ 17 ರಿಂದ ನಡೆಯಲಿದೆ.
ಸೂಪರ್ 12 ರ ಗ್ರೂಪ್ 1 ರಲ್ಲಿ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಮೊದಲ ಎ ಗ್ರೂಪ್ ನ ವಿಜೇತ ತಂಡ ಗ್ರೂಪ್ ಎ ನಲ್ಲಿರಲಿವೆ. ಮತ್ತೊಂದೆಡೆ, ಗ್ರೂಪ್ 2ನಲ್ಲಿ ಭಾರತ ಮತ್ತು ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ಹಾಗೂ ಬಿ ಗ್ರೂಪ್ ವಿಜೇತ ತಂಡವಿರಲಿದೆ.