ಕೂಲಿ ಕಾರ್ಮಿಕನೊಬ್ಬ ತನ್ನ ತಲೆಯ ಮೇಲೆ ಒಮ್ಮೆಲೇ 32 ಇಟ್ಟಿಗೆಗಳನ್ನು ನಾಜೂಕಾಗಿ ಹೊರುವ ವಿಡಿಯೊವೊಂದನ್ನು ಮಹೀಂದ್ರಾ ಕಂಪನಿಯ ಮಾಲೀಕ ಆನಂದ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಯಾರೂ ಕೂಡ ಇಂಥ ಕ್ಲಿಷ್ಟಕರ ಕೆಲಸವನ್ನು ಇಂದಿನ ದಿನಗಳಲ್ಲಿ ಮಾಡಬಾರದು ಎಂದು ಮರುಗಿದ್ದಾರೆ. ಇದಕ್ಕೆ ತಮ್ಮ ಟ್ವಿಟರ್ ಫಾಲೋವರ್ಸ್‍ಗಳಿಂದ ನೆರವನ್ನು ಕೂಡ ಬಯಸಿರುವ ಅವರು, ವಿಡಿಯೋದ ನೈಜ ಸ್ಥಳವನ್ನು ಹಾಗೂ ಕಾರ್ಮಿಕನನ್ನು ಪತ್ತೆ ಮಾಡಲು ಕೋರಿದ್ದಾರೆ. ಆಟೊಮ್ಯಾಟಿಕ್ ಇಟ್ಟಿಗೆ ಲೋಡ್ ಮಾಡುವ ಯಂತ್ರಗಳು ಕಾರ್ಮಿಕನ ಮಾಲೀಕನ ಬಳಿ ಇಲ್ಲವೇ ಎಂದು ಪತ್ತೆ ಮಾಡಿ ತಿಳಿಸುವಂತೆಯೂ ಮನವಿ ಮಾಡಿದ್ದಾರೆ. ಇಂಥ ಅಪರೂಪದ ಕೌಶಲಪೂರ್ಣ ಕಾರ್ಮಿಕನನ್ನು ಗುರುತಿಸಿ, ಸೂಕ್ತ ಶಹಬ್ಬಾಸ್‍ಗಿರಿ ನೀಡಬೇಕು ಎಂದು ಮನತುಂಬಿ ಶ್ಲಾಘಿಸಿದ್ದಾರೆ.
ಇಂಧನ ಬೆಲೆ ಏರಿಕೆ ಹಿಂದಿನ ಕಾರಣ ಬಿಚ್ಚಿಟ್ಟ ವಿತ್ತ ಸಚಿವೆ
ಆನಂದ್ ಅವರಿಗೆ ಪ್ರತಿಕ್ರಿಯಿಸಿರುವ ಫಾಲೋವರ್ಸ್‍ಗಳು, ಇದೊಂದು 2017ರ ವಿಡಿಯೋವಾಗಿದ್ದು ಆಫ್ರಿಕಾದ್ದು ಎಂದಿದ್ದಾರೆ. ಮತ್ತೆ ಕೆಲವರು ಬಿಹಾರ ಮತ್ತು ಉತ್ತರಪ್ರದೇಶದ ಕಡೆ ಬಂದರೆ ದಿನವೂ ಇಂಥ ಚಿತ್ರಣ ಕಾಣಬಹುದು ಎಂದು ತಿಳಿಸಿದ್ದಾರೆ. ಕನ್ವೇಯರ್ ಬೆಲ್ಟ್, ಹೈಡ್ರಾಲಿಕ್ ಲಿಫ್ಟ್ಸ್ ಬಳಸಿ ಇಟ್ಟಿಗೆಗಳನ್ನು ಲೋಡ್ ಮಾಡುವ ಸಾಧನಗಳು ಲಭ್ಯವಿದೆ ಎಂದು ಕೆಲವು ತಂತ್ರಜ್ಞರು ಸಲಹೆಯನ್ನು ಕೂಡ ಕೊಟ್ಟಿದ್ದಾರೆ.