alex Certify BIG NEWS: ಡ್ರೋನ್ ಬಳಕೆಗೆ 10 ಕಂಪನಿಗಳಿಗೆ ಷರತ್ತುಬದ್ದ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರೋನ್ ಬಳಕೆಗೆ 10 ಕಂಪನಿಗಳಿಗೆ ಷರತ್ತುಬದ್ದ ಅನುಮತಿ

ಡ್ರೋನ್ ಬಳಸಲು ಹತ್ತು ಕಂಪನಿಗಳಿಗೆ ಷರತ್ತುಬದ್ಧ ಅನುಮತಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನೀಡಿವೆ.

ಕರ್ನಾಟಕದ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ನಡೆಸಲಾಗುವ ಆಸ್ತಿ ಮಾಲೀಕತ್ವದ ದಾಖಲೆಗಳ ಖಾತ್ರಿಗೆ ಡ್ರೋನ್‌ಗಳ ಬಳಕೆಗೆ ಅನುಮತಿ ನೀಡಲಾಗಿದೆ.

ಮಿಕ್ಕಂತೆ ಪಶ್ಚಿಮ ಬಂಗಾಳದಲ್ಲಿರುವ ಸೇಲ್ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಂಬೈ ಅಂಗ, ಗ್ಯಾಂಗ್ಟಾಕ್ ಸ್ಮಾರ್ಟ್ ಸಿಟಿ ಯೋಜನೆ, ಹೈದರಾಬಾದ್‌ನ ಏಷ್ಯಾ ಪೆಸಿಫಿಕ್ ಫ್ಲೈಟ್ ತರಬೇತಿ ಅಕಾಡೆಮಿ, ಗುಜರಾತ್‌ನ ಬ್ಲೂ ರೇ ಏವಿಯೇಷನ್, ಟ್ರಾಕ್ಟರ್ಸ್ ಅಂಡ್‌ ಇಕ್ವಿಪ್ಮೆಂಟ್‌ ನಿಯಮಿತ, ಮಹಿಂದ್ರಾ & ಮಹಿಂದ್ರಾ, ಬೇಯರ್‌ ಬೆಳೆ ವಿಜ್ಞಾನ ಮತ್ತು ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಗಳಿಗೆ ಡ್ರೋನ್ ಬಳಸಲು ಅನುಮತಿ ನೀಡಲಾಗಿದೆ.

ʼವೈಟ್​ಹೆಡ್​ʼ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಉಪಯೋಗಿಸಿ ಈ ಮನೆ ಮದ್ದು….!

ಸಾರ್ವಜನಿಕರಿಗೆ ಡ್ರೋನ್ ನಿಯಮಗಳು, 2021 ಈ ಹಿಂದೆ ಇದ್ದ ಮಾನವರಹಿತ ವೈಮಾನಿಕ ವ್ಯವಸ್ಥೆ ನಿಯಮಗಳು, 2021ರ ಬದಲಿಗೆ ಚಾಲ್ತಿಗೆ ಬರಲಿದ್ದು, ಡ್ರೋನ್ ಬಳಸಲು ಕಂಪನಿಗಳಿಗೆ ಅನುಮತಿ ಪಡೆಯುವುದನ್ನು ಸರಳೀಕರಿಸಲಾಗಿದೆ.

ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲದೇ ಡ್ರೋನ್‌ಗಳನ್ನು ಬಳಸಲು ಅನುಮತಿ ನೀಡುವುದಿಲ್ಲ. ಡಿಜಿಟಲ್ ಸ್ಕೈ ಪ್ಲಾಟ್‌ಫಾರಂನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡುವ ಮೂಲಕ ಡ್ರೋನ್ ನಿರ್ವಾಹಕರು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆಯಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...