ಮುಂಬೈ: ವಾಣಿಜ್ಯ ನಗರದಲ್ಲಿ ಪ್ರತಿದಿನವು ಒಂದಿಲ್ಲೊಂದು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ, ಈಗ ಬೆಳಕಿಗೆ ಬಂದಿರುವ ಘಟನೆ ಬಹಳ ಶ್ರೀಮಂತ ಮತ್ತು ಘನತೆಯುಳ್ಳ ಕುಟುಂಬದ ಹೆಣ್ಣುಮಗಳಿಗೆ ಗಂಡು ಮಗುವನ್ನೇ ಹೆರುವಂತೆ ಪಾಪಿ ಗಂಡ ಕೊಟ್ಟ ಚಿತ್ರಹಿಂಸೆಯದ್ದು.
2007ರಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಮಗಳನ್ನು ವಕೀಲನಿಗೆ ವಿವಾಹ ಮಾಡಿಕೊಟ್ಟರು. ಶಿಕ್ಷಿತ ಮತ್ತು ಶ್ರೀಮಂತ ಕುಟುಂಬಕ್ಕೆ ಮಗಳು ಸೇರಿದ ತೃಪ್ತಿ ಅವರಲ್ಲಿತ್ತು.
ಕೆಲವು ವರ್ಷಗಳ ಬಳಿಕ ಕಣ್ಣೀರು ಸುರಿಸುತ್ತಾ ಮಗಳು ತನ್ನ ಹಿಂಸೆಯ ಅನುಭವ ತೆರೆದಿಟ್ಟಾಗ ಆ ಕುಟುಂಬದ ಬಣ್ಣ ಬಯಲಾಗಿತ್ತು,
ವಕೀಲನ ಪುತ್ರ ವ್ಯಾಮೋಹ…!
ಹೌದು, ಗಂಡು ಮಗುವನ್ನೇ ಹೆರುವಂತೆ ಒತ್ತಡ ಹೇರಿದ್ದ ವಕೀಲ ಗಂಡ, ನಿವೃತ್ತ ನ್ಯಾಯಾಧೀಶೆಯ ಮಗಳಾದ ತನ್ನ ಪತ್ನಿಗೆ ನಿತ್ಯ ಹೊಡೆದು ಬಡಿದು ಮಾಡುತ್ತಿದ್ದ.
ʼವೈಟ್ಹೆಡ್ʼ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಲು ಉಪಯೋಗಿಸಿ ಈ ಮನೆ ಮದ್ದು….!
ಪ್ರತಿ ಬಾರಿ ಗರ್ಭಿಣಿಯಾದಾಗಲೂ ಗೌಪ್ಯವಾಗಿ ಭ್ರೂಣ ಪರೀಕ್ಷೆ ಮಾಡಿಸಿ, ಒಟ್ಟು ಎಂಟು ಬಾರಿ ಗರ್ಭಪಾತ ಮಾಡಿಸಿದ್ದ. ಕಾರಣ, ಅದು ಹೆಣ್ಣು ಭ್ರೂಣವಾಗಿತ್ತು.
ಇದಲ್ಲದೆ, ಹೆಂಡತಿಗೆ ಗಂಡು ಮಗು ಹೆರಲು ಚಿಕಿತ್ಸೆ ಕೊಡಿಸಲು ಬ್ಯಾಂಕಾಕ್ಗೆ ಕರೆದೊಯ್ದು 1500 ಸ್ಟಿರಾಯ್ಡ್ಸ್ ಮತ್ತು ಹಾರ್ಮೋನ್ ಇಂಜೆಕ್ಷನ್ಗಳನ್ನು ಕೊಡಿಸಿದ್ದ ಎಂದು ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ, 40 ವರ್ಷದ ಮಹಿಳೆಯು ಗಂಡನ ವಿರುದ್ಧ ಸಿಡಿದೆದ್ದು ದಾದರ್ ಪೊಲೀಸರಿಗೆ ದೂರು ನೀಡಿದ್ದಾಳೆ.