ಮೇಷ : ವಿದ್ಯಾರ್ಥಿಗಳು ಇಂದು ಹೆಚ್ಚು ಲವಲವಿಕೆಯಿಂದ ಇರಲಿದ್ದಾರೆ. ಕಚೇರಿಯಲ್ಲಿ ನೀವು ಮಾಡಿದ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಸಂಗಾತಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ನೀಡಲಿದ್ದಾರೆ. ಪೋಷಕರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ : ರಾಜಕೀಯ ರಂಗದಲ್ಲಿ ಇರುವವರಿಗೆ ಶತ್ರುಗಳ ಕಾಟ ಹೆಚ್ಚಲಿದೆ. ನಿಮ್ಮ ಜೊತೆಗೆ ಇದ್ದುಕೊಂಡೇ ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ಯಾರನ್ನೂ ಅಷ್ಟು ಸುಲಭವಾಗಿ ನಂಬಬೇಡಿ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ.
ಮಿಥುನ : ನಿಮಗೆ ಆಗದವರು ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ದೃತಿಗೆಡಬೇಡಿ. ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಜಮೀನು ಖರೀದಿಗೆ ಮುಂದಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಪ್ರಗತಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕಟಕ : ಕೃಷಿಕರಿಗೆ ಇಂದು ಲಾಭ ಕೂಡಿ ಬರಲಿದೆ. ಸಾರ್ವಜನಿಕ ಜಾಗಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದಿರಿ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆಯನ್ನು ನಿರೀಕ್ಷಿಸಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಶುಭ ಯೋಗವಿದೆ.
ಸಿಂಹ : ಉದ್ಯೋಗಕ್ಕಾಗಿ ಅರಸುತ್ತಿದ್ದವರಿಗೆ ಸಾಲು ಸಾಲು ಅವಕಾಶಗಲು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಶುಭಕಾರ್ಯ ನಡೆಸುವ ಬಗ್ಗೆ ಹಿರಿಯರ ಜೊತೆ ಚರ್ಚೆ ನಡೆಸಲಿದ್ದೀರಿ. ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಇದು ಲಾಭದ ದಿನ. ಜವಳಿ ಹಾಗೂ ಎಲೆಕ್ಟ್ರಾನಿಕ್ ವಸ್ತು ವ್ಯಾಪಾರಿಗಳು ಕೊಂಚ ನಷ್ಟವನ್ನು ಅನುಭವಿಸಲಿದ್ದೀರಿ.
ಕನ್ಯಾ : ನೀವು ಮಾಡುವ ಕೆಲಸಗಳಿಗೆ ಸಾರ್ವಜನಿಕ ರಂಗದಲ್ಲಿ ಮನ್ನಣೆ ಸಿಗಲಿದೆ. ನಿಮ್ಮನ್ನು ನಾಶ ಮಾಡಲು ಶತ್ರುಗಳು ಪಿತೂರಿ ಹೂಡಿದ್ದಾರೆ. ಅವರ ಸಂಚಿಗೆ ಬಲಿಯಾಗದಂತೆ ಎಚ್ಚರ ವಹಿಸಿ. ಹಲ್ಲುನೋವಿನ ಸಮಸ್ಯೆಯಿಂದ ಇಡೀ ದಿನ ಕಿರಿಕಿರಿ ಅನುಭವಿಸುತ್ತೀರಿ. ಶಿವನನ್ನು ಆರಾಧಿಸಿ.
ತುಲಾ : ಕುಟುಂಬ ಸಮೇತ ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ಹೊಗಳುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂಬ ತಪ್ಪು ಭಾವನೆ ಬೇಡವೇ ಬೇಡ. ಕೈಲಾಗದ ಕೆಲಸಕ್ಕೆ ಮುಂದಾಗಿ ಕೈ ಸುಟ್ಟಿಕೊಳ್ಳಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ.
ವೃಶ್ಚಿಕ : ಕುಟುಂಬಸ್ಥರ ಎದುರು ಆದಷ್ಟು ಸಹನೆಯಿಂದ ವರ್ತಿಸಿ. ಕೋಪದ ಕೈಗೆ ಬುದ್ಧಿ ಕೊಟ್ಟು ಆತುರದ ನಿರ್ಧಾರ ಕೈಗೊಳ್ಳಬೇಡಿ. ಕೋರ್ಟ್ – ಕಚೇರಿ ವ್ಯವಹಾರದಲ್ಲಿ ನಿಮಗೆ ಮುನ್ನಡೆ ಕಾದಿದೆ. ನಿಮಗೆ ನಷ್ಟ ಎನಿಸುವ ಕೆಲಸವನ್ನು ನಯವಾಗಿ ತಿರಸ್ಕರಿಸಿ.
ಧನು : ಪರಿಸ್ಥಿತಿ ನಿಮ್ಮ ಪರವಾಗಿಯೇ ಇರೋದ್ರಿಂದ ಸಂಗಾತಿ ನಿಮ್ಮ ಮಾತನ್ನು ಕೇಳುತ್ತಾರೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಹಣದ ಆಸೆಗೆ ಅಡ್ಡದಾರಿ ಹಿಡಿಯಬೇಡಿ. ಮೊಸದ ಜೀವನ ಎಂದಿಗೂ ನಿಮಗೆ ನೆಮ್ಮದಿ ನೀಡಲಾರದು.
ಮಕರ : ಸಾಧ್ಯವಾದಲ್ಲಿ ನಿಮ್ಮ ನೆರೆ ಹೊರೆಯವರಿಗೆ ಸಹಾಯ ಮಾಡಿ. ಮಾತು ಕಮ್ಮಿ ಕೆಲಸ ಜಾಸ್ತಿ ಎಂದು ಹಿರಿಯರು ಹೇಳಿದ ಮಾತು ತಲೆಯಲ್ಲಿ ಇರಲಿ. ಮಕ್ಕಳು ನೀಡುವ ಗೌರವದಿಂದ ನೀವು ಸಂತುಷ್ಟರಾಗಲಿದ್ದೀರಿ. ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಕುಂಭ : ನಿಮ್ಮ ಮಾತುಕತೆ ಹಾಗೂ ಸಂವಹನಾ ಕೌಶಲ್ಯದಿಂದಾಗಿ ಕೆಲಸದಲ್ಲಿ ಬಡ್ತಿ ಸಿಗಲಿದೆ. ನೆನಪಿರಲಿ, ಇದರಿಂದ ನಿಮ್ಮ ಹಿತಶತ್ರುಗಳ ಸಂಖ್ಯೆ ಹೆಚ್ಚಾಗಲಿದೆ. ಮಕ್ಕಳು ತಪ್ಪು ಮಾಡಿದ್ದಾರೆಂದು ರೇಗದಿರಿ. ತಾಳ್ಮೆಯಿಂದ ಅವರನ್ನು ತಿದ್ದುವ ಕೆಲಸ ಮಾಡಿ.
ಮೀನ: ನಿಮ್ಮ ಸಂವಹನಾ ಕೌಶಲ್ಯದಿಂದಲೇ ಜನರನ್ನು ಆಕರ್ಷಿಸುತ್ತೀರಿ. ಹೀಗಾಗಿ ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಸದಾ ಮುನ್ನಡೆ ಇದೆ. ಹೊಸ ಮನೆ ನಿರ್ಮಾಣದ ಬಗ್ಗೆ ಹಿರಿಯರೊಂದಿಗೆ ಚರ್ಚೆ ನಡೆಸಲಿದ್ದೀರಿ. ಜೇಬಿನಲ್ಲಿ ಹಣ ಎಷ್ಟಿದೆ ಎಂದು ನೋಡಿಕೊಂಡು ಖರ್ಚು ಮಾಡಿ.