ಸುರಕ್ಷಿತ ಹೂಡಿಕೆ ಬಯಸುತ್ತಿದ್ದರೆ ಅಂಚೆ ಕಚೇರಿ ಇದಕ್ಕೆ ಉತ್ತಮ ಆಯ್ಕೆಯಾಗಿದೆ. ಹೂಡಿಕೆ ಸುರಕ್ಷಿತವಾಗಿರುವ ಜೊತೆಗೆ ನಿಗದಿತ ಸಮಯದ ನಂತ್ರ ಡಬಲ್ ಹಣ ನಿಮ್ಮ ಕೈಸೇರುತ್ತದೆ. ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಅತ್ಯುತ್ತಮ ಆಯ್ಕೆಯಾಗಿದೆ.
ಇದು ಒಂದು ಬಾರಿ ಮಾಡುವ ಹೂಡಿಕೆಯಾಗಿದೆ. ಹಣವನ್ನು ಒಂದು ನಿಗದಿತ ಅವಧಿಯಲ್ಲಿ ದ್ವಿಗುಣಗೊಳಿಸಲಾಗುತ್ತದೆ. ಕಿಸಾನ್ ವಿಕಾಸ್ ಪತ್ರವು ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕುಗಳಲ್ಲಿ ಸಿಗಲಿದೆ. ಇದರ ಮುಕ್ತಾಯ ಅವಧಿ ಪ್ರಸ್ತುತ 124 ತಿಂಗಳುಗಳು. ಕನಿಷ್ಠ 1000 ರೂಪಾಯಿಗಳನ್ನು ಇದರಲ್ಲಿ ಹೂಡಿಕೆ ಮಾಡಬೇಕು. ಇದರ ಅಡಿಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಪ್ರಮಾಣಪತ್ರದ ರೂಪದಲ್ಲಿ ಹೂಡಿಕೆಯನ್ನು ಮಾಡಲಾಗುತ್ತದೆ. 1000 ರೂಪಾಯಿ, 5000 ರೂಪಾಯಿ, 10,000 ರೂಪಾಯಿ ಮತ್ತು 50,000 ರೂಪಾಯಿವರೆಗಿನ ಪ್ರಮಾಣಪತ್ರಗಳನ್ನು ಖರೀದಿಸಬಹುದಾಗಿದೆ.
ಈ ಯೋಜನೆಯಲ್ಲಿ ಯಾವುದೇ ಹೂಡಿಕೆಯ ಮಿತಿಯಿಲ್ಲ. ಸರ್ಕಾರ 50,000 ರೂಪಾಯಿಗಿಂತ ಹೆಚ್ಚಿನ ಹೂಡಿಕೆಗಳಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ. ಆಧಾರನ್ನು ಗುರುತಿನ ಚೀಟಿಯಾಗಿ ನೀಡಬೇಕಾಗುತ್ತದೆ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹೂಡಿಕೆ ಮಾಡಿದರೆ, ಐಟಿಆರ್, ಸಂಬಳದ ಚೀಟಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ನಂತಹ ಆದಾಯ ಪುರಾವೆಗಳನ್ನು ಸಹ ಸಲ್ಲಿಸಬೇಕು. ಇದಕ್ಕೆ, ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿಲ್ಲ.