ತಮ್ಮ ಮನೆಯ ಮಗನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಕೋಪಗೊಂಡ ಕುಟುಂಬ ಸದಸ್ಯರು ಆಕೆಯನ್ನು ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಮಹಿಳೆಯನ್ನು ಝಾನ್ಸಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ರ 90 ಪ್ರತಿಶತ ಸುಟ್ಟು ಹೋಗಿದ್ದ 30 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಮಾತನಾಡಿದ ಮಹಬೋಬಾದ ಪೊಲೀಸ್ ಸೂಪರಿಟೆಂಡೆಂಟ್ ಸುಧಾ ಸಿಂಗ್, ಮೃತ ಮಹಿಳೆ ತನ್ನ ನೆರೆಮನೆಯವನ ವಿರುದ್ಧ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಸಂಬಂಧ ದೂರನ್ನು ದಾಖಲಿಸಿದ್ದಳು. ಈ ಪ್ರಕರಣವನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿಯ ಪೋಷಕರು ಮಹಿಳೆಯ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಸ್ವತಃ ಮೃತ ಮಹಿಳೆ ಸಾಯೋದಕ್ಕೂ ಮುನ್ನ ಮಾಹಿತಿ ನೀಡಿದ್ದಾಳೆ. ತಾನು ಜಮೀನಿನಲ್ಲಿ ಒಬ್ಬಳೇ ಇದ್ದುದ್ದನ್ನು ನೋಡಿದ ಆರೋಪಿಯ ಪೋಷಕರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಸಾಯೋದಕ್ಕೂ ಮುನ್ನ ಹೇಳಿಕೆ ದಾಖಲಿಸಿದ್ದಾಳೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಸ್ಟೇಷನ್ ಹೌಸ್ ಆಫೀಸರ್ ಮಹೇಂದ್ರ ಪ್ರತಾಪ್ ಸಿಂಗ್, ಮೃತ ಮಹಿಳೆಯ ಕುಟುಂಬಸ್ಥರು ನೀಡಿರುವ ದೂರನ್ನು ಆಧರಿಸಿ 50 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ದೂರುದಾರರು ಆರೋಪಿಯ ತಂದೆಯ ಹೆಸರನ್ನು ನಮೂದಿಸಿಲ್ಲ ಎಂದು ಹೇಳಿದ್ರು.