ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ವಿಶೇಷ ಠೇವಣಿ ಯೋಜನೆಗಳನ್ನು ಆರಂಭಿಸಲಾಗಿದೆ. ಎಸ್ಬಿಐ ಪ್ಲಾಟಿನಮ್ ಡೆಪಾಸಿಟ್ ಸ್ಕೀಮ್ ಎಂದು ಯೋಜನೆಗಳಿಗೆ ಹೆಸರಿಡಲಾಗಿದೆ. ಮುಂದಿನ ತಿಂಗಳ 14ರವರೆಗೆ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ.
ಪ್ಲಾಟಿನಮ್ ಟರ್ಮ್ ಡೆಪಾಸಿಟ್ ಯೋಜನೆಗಳ ಅಡಿಯಲ್ಲಿ 75 ದಿನಗಳು, 525 ದಿನಗಳು, 2250 ದಿನಗಳವರೆಗೆ ಠೇವಣಿ ಇರಿಸಲು ಅವಕಾಶ ನೀಡಲಾಗಿದೆ 75 ದಿನಗಳ ಯೋಜನೆಗೆ 3.95 ಪರ್ಸೆಂಟ್ ಬಡ್ಡಿ ನೀಡಲಾಗುವುದು. 525 ದಿನಗಳಿಗೆ 5.10 ಪರ್ಸೆಂಟ್ ಬಡ್ಡಿ ನೀಡಲಾಗುವುದು, 2250 ದಿನಗಳಿಗೆ 5.5 ಪರ್ಸೆಂಟ್ ಬಡ್ಡಿ ನೀಡಲಾಗುವುದು.
ಹಿರಿಯ ನಾಗರಿಕರಿಗೆ ಯೋಜನೆಗಳಡಿಯಲ್ಲಿ ಇನ್ನೂ ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ನೀಡಲಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಬಹುದು ಅಥವಾ ಯೋನೋ ಮೊಬೈಲ್ ಆಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.