alex Certify ಭಾರತದ ಇತಿಹಾಸದಲ್ಲಿಯೇ ಯಾವ ಆಸ್ಪತ್ರೆ ಬಳಿಯೂ ಇರದ ಸೌಕರ್ಯವನ್ನು ಪಡೆದ ಏಮ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಇತಿಹಾಸದಲ್ಲಿಯೇ ಯಾವ ಆಸ್ಪತ್ರೆ ಬಳಿಯೂ ಇರದ ಸೌಕರ್ಯವನ್ನು ಪಡೆದ ಏಮ್ಸ್..!

ದೆಹಲಿಯ ಪ್ರತಿಷ್ಟಿತ ಏಮ್ಸ್​ನ ಆಸ್ಪತ್ರೆ ಆವರಣದಲ್ಲಿಯೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಆಸ್ಪತ್ರೆ ಆವರಣದಲ್ಲೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಿದ ದೇಶದ ಮೊದಲ ಆಸ್ಪತ್ರೆ ಎಂಬ ಕೀರ್ತಿಗೆ ಏಮ್ಸ್ ಪಾತ್ರವಾಗಿದೆ ಎಂದು ನಿರ್ದೇಶಕ ಡಾ. ರಂದೀಪ್​ ಗುಲೇರಿಯಾ ಹೇಳಿದ್ರು.

ದೆಹಲಿ ಅಗ್ನಿಶಾಮಕ ದಳ ನಿರ್ದೇಶಕ ಅತುಲ್​ ಗರ್ಗ್​ ಈ ವಿಚಾರವಾಗಿ ಮಾತನಾಡಿದ್ದು, ಏಮ್ಸ್​ ಆಸ್ಪತ್ರೆಯು ಡಿಎಫ್​ಎಸ್​​​ ಜೊತೆಗಿನ ಸಹಭಾಗಿತ್ವದ ಮೂಲಕ ಈ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಿದೆ ಎಂದು ಹೇಳಿದ್ರು.

ಅಗ್ನಿಶಾಮಕ ದಳಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಏಮ್ಸ್ ಒದಗಿಸಲಿದೆ ಹಾಗೂ ಸಿಬ್ಬಂದಿ ಸೌಕರ್ಯವನ್ನು ದೆಹಲಿ ಅಗ್ನಿಶಾಮಕದಳ ನೋಡಿಕೊಳ್ಳಲಿದೆ ಎಂದು ಅತುಲ್​ ಗರ್ಗ್​ ಹೇಳಿದ್ದಾರೆ.

ದೆಹಲಿ ಅಗ್ನಿಶಾಮಕ ದಳಕ್ಕೆ ಇನ್ನೊಂದು ಹೆಮ್ಮೆಯ ಕ್ಷಣ. ಏಮ್ಸ್​ ಜೊತೆ ಕೈ ಜೋಡಿಸಿರುವ ಡಿಎಫ್​ಎಸ್​​​ ಆಸ್ಪತ್ರೆ ಕ್ಯಾಂಪಸ್​ನಲ್ಲಿಯೇ ತುರ್ತು ಪರಿಸ್ಥಿತಿಗಾಗಿ ಅಗ್ನಿಶಾಮಕ ಕೇಂದ್ರವನ್ನೇ ಸ್ಥಾಪನೆ ಮಾಡಿದೆ.

ಭಾರತದ ಇತಿಹಾಸದಲ್ಲಿಯೇ ಆಸ್ಪತ್ರೆ ಆವರಣದ ಒಳಗಡೆಯೇ ಅಗ್ನಿಶಾಮಕ ಕೇಂದ್ರ ಸ್ಥಾಪನೆ ಮಾಡಿದ ಮೊದಲ ಆಸ್ಪತ್ರೆ ಏಮ್ಸ್ ಆಗಿದೆ. ಈ ಅಗ್ನಿಶಾಮಕ ದಳ ಕೇಂದ್ರದ ಮೂಲ ಸೌಕರ್ಯಗಳ ಜವಾಬ್ದಾರಿಯನ್ನು ಏಮ್ಸ್ ವಹಿಸಲಿದೆ. ಹಾಗೂ ಸಿಬ್ಬಂದಿ ಸೌಕರ್ಯವನ್ನು ಡಿಎಫ್​ಎಸ್​ ನೋಡಿಕೊಳ್ಳಲಿದೆ ಎಂದು ಡಿಎಫ್​ಎಸ್​ ನಿರ್ದೇಶಕ ಅತುಲ್​ ಗರ್ಗ್ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...